ಆಟೋ ಚಾಲಕರ ಕಷ್ಟಕ್ಕೆ ಮಿಡಿದ ನಟ ವಿನೋದ್ ರಾಜ್

0
11

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ಬೆಂಗಳೂರು: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಪರಿಣಾಮ ರಾಜಧಾನಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಆಟೋ ಎಲ್ ಪಿಜಿ ಕೊರತೆ ಎದುರಾಗಿದೆ. ಬೆಂಗಳೂರಿನಲ್ಲಿ ಎಲ್‌ಪಿಜಿ ಗ್ಯಾಸ್ ಸಿಗದೆ ಆಟೋ ಚಾಲಕರು ಪರದಾಡುತ್ತಿದ್ದಾರೆ.

ದಿನದ ದುಡಿಮೆ ನಂಬಿ ಜೀವನ ನಡೆಸುವ ಆಟೋ ಚಾಲಕರ ಕಷ್ಟಕ್ಕೆ ಮಿಡಿದ ಹಿರಿಯ ನಟ ವಿನೋದ್ ರಾಜ್ ಅವರು ಸಹಾಯ ಹಸ್ತ ಚಾಚಿದ್ದಾರೆ.

ಬೆಂಗಳೂರಿನ ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ತಾಯಿ ಡಾ.ಲೀಲಾವತಿ ಅವರ ಸಮಾಧಿ ಬಳಿ ವಿನೋದ್ ರಾಜ್ ಅವರು ನೂರಾರು ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಣೆ ಮಾಡಿ, ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

ತಾಯಿ ಹೆಸರಿನಲ್ಲಿ ಆಟೋ ಚಾಲಕರಿಗೆ ಊಟ ಹಾಕಿ, ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಆಟೋ ಚಾಲಕರ ಸಂಕಷ್ಟಕ್ಕೆ ತಮ್ಮ ಕೈಲಾದ ನೆರವು ಮಾಡುವ ಮ‌ೂಲಕ ಮಾನವೀಯತೆ ಮೆರೆದಿದ್ದಾರೆ. ನಟ ವಿನೋದ್ ರಾಜ್ ಕಾರ್ಯಕ್ಕೆ ಆಟೋ ಚಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here