ಪ್ರತಿಯೊಂದು ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ‌ಆಗಬೇಕು ಎಂದು ಘೋಷಣೆ: ಸಿಎಂ

0
9

Updated By: Priyalachhi 

ಹಾವೇರಿ: ಅಧಿಕಾರದಲ್ಲಿ ಎಷ್ಟು ದಿನ ಇರುತ್ತಿನೋ ಗೊತ್ತಿಲ್ಲ. ಆದರೆ ನನ್ನ ಆಡಳಿತದ ಬಗ್ಗೆ ನನಗೆ ತೃಪ್ತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ‌.

ಹಾವೇರಿಯಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಾವೇರಿಗೆ ನಾನೇ ಮೆಡಿಕಲ್ ಕಾಲೇಜು ಘೋಷಣೆ ಮಾಡಿ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಈ ಮೆಡಿಕಲ್ ಕಾಲೇಜಿಗೆ ಸುಮಾರು 500 ಕೋಟಿ ಖರ್ಚು ಮಾಡಿದ್ದೇವೆ‌ ಎಂದರು.

ಅರಸು ದಾಖಲೆ ಮುರಿದ ವಿಚಾರ ಕುರಿತಂತೆ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ಇಲ್ಲಿವರೆಗೂ ಬಂದಿದ್ದೇನೆ‌. ಇನ್ನೂ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಿನೋ ಗೊತ್ತಿಲ್ಲ. ಆದರೆ ನನ್ನ ಆಡಳಿತ ಬಗ್ಗೆ ತೃಪ್ತಿಯಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಅನ್ನ ಭಾಗ್ಯ ಕೊಟ್ಟವರು ಯಾರು?, ಕೃಷಿ ಭಾಗ್ಯ ಮಾಡಿದವರು ಯಾರು?, ರೈತರಿಗೆ ಮನಸ್ವಿನಿ ಮಾಡಿದವರು? ಶಕ್ತಿ ಯೋಜನೆ ಮಾಡಿದವರು ಯಾರು?
ಗೃಹ ಲಕ್ಷ್ಮಿ, ಗೃಹ ಜ್ಯೋತಿ ಮಾಡಿದವರು ಯಾರು? ಪ್ರತಿ ವರ್ಷ 3 ಲಕ್ಷ ಮನೆ ಕಟುತ್ತೇವೆ ಅಂತ ಹೇಳಿದ್ದೆವು. 14,52,000 ಮನೆ ಕಟ್ಟಿದ್ದೇವೆ ಎಂದು ಬಿಜೆಪಿಗೆ ಸಿಎಂ ಟಾಂಗ್ ನೀಡಿದರು.

ಪೂರ್ಣಾವಧಿ ಅಧಿಕಾರ ಪೂರೈಸ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಸಿಎಂ ಪುನರುಚ್ಚರಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here