ವೀರಶೈವ ಲಿಂಗಾಯತ ವಿಧಿವಿಧಾನದಂತೆ ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ; ಮಣ್ಣಲ್ಲಿ ಮಣ್ಣಾದ ದಾವಣಗೆರೆ ಧಣಿ

0
35

Updated By: Priyalachhi

ದಾವಣಗೆರೆ: ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದ ಕಾಂಗ್ರೆಸ್‌ನ ಹಿರಿಯ ಶಾಸಕ, ರಾಜಕೀಯ ಮುತ್ಸದ್ದಿ, ದಾವಣಗೆರೆ ಧಣಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಇಲ್ಲಿನ ಮಟ್ಟಿಕಲ್ಲು ಬಳಿಯ ಕಲ್ಲೇಶ್ವರ ಮಿಲ್​ನ ಆವರಣದಲ್ಲಿ ಕುಟುಂಬಸ್ಥರು, ಗಣ್ಯರು, ಸಾ‌ರ್ವಜನಿಕರು ಹಾಗೂ ಅಭಿಮಾನಿಗಳು ಸಮ್ಮುಖದಲ್ಲಿ ನೆರೆವೇರಿತು. ಕ್ರಿಯಾ ಸಮಾಧಿ ಮಾಡಿ ಐಕ್ಯ ಮಂಟಪದಲ್ಲಿ ವಿಭೂತಿ ಗಟ್ಟಿಗಳೊಂದಿಗೆ ಅವರ ಅಂತ್ಯ ಸಂಸ್ಕಾರ ನೆರವೇರಿಲಾಯಿತು.

ಭಾವುಕರಾದ ಮರಿಮೊಮ್ಮಕ್ಕಳು: ಸಿರಿಗೆರೆ ಶ್ರೀಗಳು, ವಚನಾನಂದ ಸ್ವಾಮೀಜಿ, ಪಂಚಪೀಠದ ಜಗದ್ಗುರುಗಳು ಸೇರಿದಂತೆ ಹಲವು ಮಠಾಧೀಶರ ಸಮ್ಮುಖದಲ್ಲಿ ಈ ಅಂತ್ಯ ಸಂಸ್ಕಾರ ನಡೆಯಿತು. ಶಾಮನೂರು ಶಿವಶಂಕರಪ್ಪ ಅವರ ಹಿರಿಯ ಪುತ್ರ ಬಕ್ಕೇಶ್ ಅವರು ಅಂತ್ಯಸಂಸ್ಕಾರದ ವಿಧಿವಿಧಾನ ಪೂರೈಸಿದರು‌. ಪೂಜೆ ವೇಳೆ ಸಹೋದರನಿಗೆ ಕಿರಿಯ ಸಹೋದರರಾದ ಎಸ್ ಎಸ್ ಮಲ್ಲಿಕಾರ್ಜುನ್, ಎಸ್ ಎಸ್ ಗಣೇಶ್ ಸಾಥ್ ನೀಡಿದರು. ಮಣ್ಣಲ್ಲಿ ಮಣ್ಣಾದ ಹಿರಿಯ ಜೀವಿ ಕಂಡು ಸೊಸೆಯಂದಿರು, ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಭಾವುಕರಾದರು. ತಾತನ ಅಂತ್ಯಸಂಸ್ಕಾರದ ಸ್ಥಳದಲ್ಲೇ ನಿಂತು ವಿಭೂತಿ ಅರ್ಪಿಸಿ ಪೂಜೆ ಮಾಡಿ ಮೊಮ್ಮಕ್ಕಳು ಕಳುಹಿಸಿ ಕೊಟ್ಟರು. ಅರ್ಚಕರು ವಿಧಿವಿಧಾನ ನೆರವೇರಿಸಿದರು. ಕುಣಿಯಲ್ಲಿ ಇಳಿದು ಪುತ್ರರು ಹಾಗೂ ಕುಟುಂಬಸ್ಥರು, ಬಂಧುಮಿತ್ರರು ವಿಧಿವಿಧಾನ ನೆರವೇರಿಸಿದರು. ಇವರೆಲ್ಲರ ಸಮ್ಮುಖದಲ್ಲೇ ಅಂತ್ಯಸಂಸ್ಕಾರ ಮಾಡಲಾಯಿತು.

ಇದಕ್ಕೂ ಮುನ್ನ ರಂಭಾಪುರಿ ಜಗದ್ಗುರುಗಳು ಶಾಮನೂರು ಶಿವಶಂಕರಪ್ಪನವರ ಬಗ್ಗೆ ಹಿತವಚನ ಮಾಡಿದರು. ಈ ವೇಳೆ ಶಾಮನೂರು ಶಿವಶಂಕರಪ್ಪನವರ ಪಾರ್ಥಿವ ಶರೀರಕ್ಕೆ ಚರ್ಚ್ ಫಾಧರ್​ಗಳು ಪುಷ್ಪ ಮಾಲೆ ಅರ್ಪಿಸಿದರು.‌ ಧರ್ಮಾತೀತವಾಗಿ ಗೌರವ ಸೂಚಿಸಿದ ಬಳಿಕ ಅಂತಿಮ ದರ್ಶನಕ್ಕೆ ಕಲ್ಪಿಸಲಾಯಿತು. ಅಂತ್ಯಸಂಸ್ಕಾರದ ಸ್ಥಳಕ್ಕೆ ಆಗಮಿಸಿದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಂತಿಮ ದರ್ಶನ ಪಡೆದರು. ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಶಾಮನೂರು ಶಿವಶಂಕರಪ್ಪ ಸಮಾಧಿ ಮಾಡಿದ್ದು ವಿಶೇಷವಾಗಿತ್ತು.

ಅಂತ್ಯಕ್ರಿಯೆ ಸ್ಥಳದಲ್ಲಿ‌ ನೂಕು ನುಗ್ಗಲು, ಸಕಲ ಸರ್ಕಾರಿ ಗೌರದೊಂದಿಗೆ ವಿದಾಯ: ಗಾಡ್ ಆಪ್ ಹಾನರ್ ನೀಡಲು ಕೂಡ ಸಾದ್ಯವಾಗದ ರೀತಿ ಜನ-ಅಭಿಮಾನಿಗಳ ಮಧ್ಯೆ ನೂಕು ನುಗ್ಗಲು ಏರ್ಪಟ್ಟಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಏಕಾಕಾಲಕ್ಕೆ ಬರುತ್ತಿದ್ದಂತೆ ನೂಕು ನುಗ್ಗಲು ಹೆಚ್ಚಾಯಿತು. ಗಣ್ಯರು ಆಗಮಿದ ಬಳಿಕ ಶಾಮನೂರು ಶಿವಶಂಕರಪ್ಪ ಪಾರ್ಥಿವ ಶರೀರಕ್ಕೆ ತ್ರಿವರ್ಣ ದ್ವಜ ಹೊದಿಸಿ ಪೊಲೀಸರು ಗೌರವ ಸೂಚಿಸಿ ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಸಚಿವರಾದ ಕೆಜೆ ಜಾರ್ಜ್, ಎಂಬಿ ಪಾಟೀಲ್, ಆರ್ ವಿ ದೇಶಪಾಂಡೆ, ಪ್ರತಿಪಕ್ಷ ನಾಯಕ ಆರ್ ಆಶೋಕ್, ಛಲವಾದಿ ನಾರಾಯಣಸ್ವಾಮಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಸೇರಿದಂತೆ ಅನೇಕ ಗಣ್ಯರು, ಕುಟುಂಬದ ಮಿತ್ರರು ಆಗಮಿಸಿ ಅಂತಿಮ ದರ್ಶನ ಪಡೆದು. ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರಿಗೆ ಧೈರ್ಯ ತುಂಬಿದರು. ಸಚಿವ ಎಂಬಿ ಪಾಟೀಲ್, ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕರು ಶಾಮನೂರು ಶಿವಶಂಕರಪ್ಪ ಅವರು ಮಣ್ಣಲ್ಲಿ ಮಣ್ಣಾಗುವ ಕೊನೆಯ ತನಕ ಇದ್ದರು.‌
sambrama prabha editor suresh kt

LEAVE A REPLY

Please enter your comment!
Please enter your name here