ಸತೀಶ್​ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ, ಇತರ ನಾಯಕರಿಗೆ ಭೋಜನಕೂಟ

0
63

Updated By: Priyalachhi

ಬೆಳಗಾವಿ: ಚಳಿಗಾಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ರಾಜ್ಯ ನಾಯಕರು ಬಂದಿದ್ದೇ ಬಂದಿದ್ದು, ಡಿನ್ನರ್ ಪಾರ್ಟಿಗಳು ನಡೆಯುತ್ತಲೇ ಇವೆ. ಗುರುವಾರ ರಾತ್ರಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ಅವರು ಆಯೋಜಿಸಿದ್ದ ಭೋಜನಕೂಟವು ತೀವ್ರ ಕುತೂಹಲ ಕೆರಳಿಸಿದೆ.

ಬೆಳಗಾವಿಯ ಕುವೆಂಪುನಗರದಲ್ಲಿ ಇರುವ ಸತೀಶ್​ ಜಾರಕಿಹೊಳಿ‌ ನಿವಾಸದಲ್ಲಿ ಡಿನ್ನರ್ ಪಾರ್ಟಿ ಕರೆದಿದ್ದರು. ಈ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್​, ಸಚಿವರಾದ ಡಾ.ಹೆಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್ ಖಾನ್ ಸೇರಿದಂತೆ 25 ಸಚಿವರು, ಶಾಸಕರು ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

ಸಚಿವ ಸಂಪುಟ ಸಭೆ ಮುಗಿಯುತ್ತಿದ್ದಂತೆ, ಸುವರ್ಣ ವಿಧಾನಸೌಧದಿಂದ ನೇರವಾಗಿ ಊಟಕ್ಕೆ ಸತೀಶ್​ ಜಾರಕಿಹೊಳಿ‌ ಅವರ ಮನೆಯತ್ತ ನಾಯಕರು ದೌಡಾಯಿಸಿದರು. ಸಿದ್ದರಾಮಯ್ಯ ಜೊತೆಗೆ ಡಾ.ಹೆಚ್.ಸಿ.ಮಹದೇವಪ್ಪ, ಜಮೀರ್ ಅಹಮ್ಮದ್ ಖಾನ್, ಡಾ.ಎಂ.ಸಿ.ಸುಧಾಕರ್ ಆಗಮಿಸಿದರು. ಈ ವೇಳೆ ಮುಖ್ಯಮಂತ್ರಿಗಳನ್ನು ಸತೀಶ್​ ಪುತ್ರ ರಾಹುಲ್ ಜಾರಕಿಹೊಳಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ಇನ್ನು, ಡಾ.ಜಿ.ಪರಮೇಶ್ವರ್​ ಜೊತೆಗೆ ಸತೀಶ್ ಜಾರಕಿಹೊಳಿ ತಮ್ಮ ಮನೆಗೆ ಆಗಮಿಸಿದರು.

ನಾಯಕರು ತರಹೇವಾರಿ ಊಟವನ್ನು ಸವಿದರು. ಸತೀಶ್​ ಜಾರಕಿಹೊಳಿ ಕೇವಲ ತಮ್ಮ ಆಪ್ತರನ್ನಷ್ಟೇ ಊಟಕ್ಕೆ ಕರೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ‌ ಅಹಿಂದ ಶಾಸಕರು, ಸಚಿವರಿಗೆ ಮಾತ್ರ ಆಹ್ವಾನ ನೀಡಿರುವುದು ಇತರ ನಾಯಕರ ನಿದ್ದೆಗೆಡಿಸಿದೆ. ಸಿಎಂ, ಇತರರ ಆಗಮನ ಹಿನ್ನೆಲೆಯಲ್ಲಿ, ಸತೀಶ್​ ಜಾರಕಿಹೊಳಿ ಮನೆ ಸುತ್ತಲೂ ಬೀಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.

ಇದಕ್ಕೂ ಮುನ್ನ, ಡಿಸೆಂಬರ್​ 10ರಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಫಿರೋಜ್‌ ಸೇಠ್‌ ಅವರ ಟಿವಿ ಸೆಂಟರ್​ನಲ್ಲಿರುವ ಮನೆಯಲ್ಲಿ ರಾತ್ರಿ ಭೋಜನಕೂಟ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಹೆಚ್​.ಸಿ.ಮಹದೇವಪ್ಪ, ಜಮೀರ್‌ ಅಹಮ್ಮದ್ ಖಾನ್, ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ರಹೀಂ ಖಾನ್‌, ಕೆ.ಜೆ.ಜಾರ್ಜ್‌, ಶಾಸಕರಾದ ಖನೀಜ್‌ ಫಾತಿಮಾ, ಸಲೀಂ ಅಹಮದ್‌, ಎನ್.ಎ.ಹ್ಯಾರಿಸ್‌ ಸೇರಿದಂತೆ ಹಲವು ಅಹಿಂದ ಶಾಸಕರು, ಮುಖಂಡರು ಡಿನ್ನರ್​ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

sambrama prabha editor suresh kt

LEAVE A REPLY

Please enter your comment!
Please enter your name here