ನಿಯಮಿತವಾಗಿ ಸೇವಿಸಿದರೆ ಶುಗರ್ ನಿಯಂತ್ರಣ ಸಾಧ್ಯ

0
30

Updated By: Priyalachhi

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ. ಇವುಗಳಲ್ಲಿ ಮಧುಮೇಹ ಕಾಯಿಲೆಯು ಒಂದು. ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಯ ಕೊರತೆಯಂತಹ ಅಂಶಗಳು ಮಧುಮೇಹಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಮಧುಮೇಹ ಇರುವವರು ಹೆಚ್ಚಾಗಿ ಏನು ತಿನ್ನಬೇಕು ಹಾಗೂ ಏನು ತಿನ್ನಬಾರದು ಎಂಬುದರ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಅವರು ಹಣ್ಣುಗಳನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ. ಕೆಲವು ಹಣ್ಣುಗಳು ತುಂಬಾ ಸಿಹಿಯಾಗಿರುವುದರಿಂದ, ಅವುಗಳನ್ನು ತಿನ್ನುವುದು ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಮಧುಮೇಹಿಗಳು ಕಡಿಮೆ ಸಕ್ಕರೆ ಅಂಶವಿರುವ ಈ ಐದು ಹಣ್ಣುಗಳನ್ನು ಸೇವಿಸಿದರೆ ಉತ್ತಮ. ಈ ಹಣ್ಣುಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.

ಕಿವಿ ಹಣ್ಣು ಅತ್ಯುತ್ತಮ: ಸೈನ್ಸ್ ಡೈರೆಕ್ಟ್.ಕಾಮ್ ವೆಬ್‌ಸೈಟ್ ಪ್ರಕಾರ, ಈ ಹಣ್ಣುಗಳು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಹಾಗೂ ಇತರ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಅವುಗಳನ್ನು ತಿನ್ನುವುದು ಹೃದಯದ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಅವು ಮೂಳೆಯ ಆರೋಗ್ಯವನ್ನು ಸಹ ಉತ್ತೇಜಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. 100 ಗ್ರಾಂ ಕಿವಿ ಹಣ್ಣಿನಲ್ಲಿ ಕೇವಲ 9 ಗ್ರಾಂ ಸಕ್ಕರೆ ಇರುತ್ತದೆ.

Diabetes  Tips for controlling diabetes  How to control sugar levels  ಶುಗರ್ ಮಟ್ಟ ನಿಯಂತ್ರಿಸುವುದು ಹೇಗೆ

ಸಂಶೋಧನಾ ಏನು ಹೇಳುತ್ತೆ ಗೊತ್ತೇ?: ಜರ್ನಲ್ ಆಫ್ ನ್ಯೂಟ್ರಿಷನ್ ಅಂಡ್ ಮೆಟಾಬಾಲಿಸಂನಲ್ಲಿ ಪ್ರಕಟವಾದ 2014 ರ ಅಧ್ಯಯನದ ಪ್ರಕಾರ, 12 ವಾರಗಳ ಕಾಲ ಪ್ರತಿದಿನ ಎರಡು ಕಿವಿಹಣ್ಣುಗಳನ್ನು ಸೇವಿಸಿದ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಇರಾನ್‌ನ ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯದ ಸಂಶೋಧಕ ಡಾ. ಮೊಹಮ್ಮದ್ ಅಲಿ ಗಫಾರಿ ಈ ಅಧ್ಯಯನದಲ್ಲಿ ಭಾಗವಹಿಸಿದ್ದರು. ಪ್ರತಿದಿನ ಎರಡು ಕಿವಿಹಣ್ಣುಗಳನ್ನು ಸೇವಿಸಿದ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿದೆ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

Diabetes  Tips for controlling diabetes  How to control sugar levels  ಶುಗರ್ ಮಟ್ಟ ನಿಯಂತ್ರಿಸುವುದು ಹೇಗೆ

ಸಿಟ್ರಸ್ ಹಣ್ಣುಗಳು ಒಳ್ಳೆಯದು: ರಾಷ್ಟ್ರೀಯ ಔಷಧ ಗ್ರಂಥಾಲಯದ ಪ್ರಕಾರ, ನಿಂಬೆಹಣ್ಣು, ಕಿತ್ತಳೆ ಹಾಗೂ ವಿವಿಧ ಸಿಟ್ರಸ್ ಹಣ್ಣುಗಳು ವಿಟಮಿನ್-ಸಿ ಯಲ್ಲಿ ಸಮೃದ್ಧವಾಗಿವೆ. ಸಿಟ್ರಸ್ ಹಣ್ಣುಗಳು ಇತರ ಅನೇಕ ಪೋಷಕಾಂಶಗಳು ಹಾಗೂ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತವೆ. ಅವುಗಳಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅವುಗಳಲ್ಲಿರುವ ನಾರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದ್ದರಿಂದ, ಮಧುಮೇಹ ಇರುವವರು ಅವುಗಳನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡದರೆ ಒಳ್ಳೆಯದು.

Diabetes  Tips for controlling diabetes  How to control sugar levels  ಶುಗರ್ ಮಟ್ಟ ನಿಯಂತ್ರಿಸುವುದು ಹೇಗೆ

ಸ್ಟ್ರಾಬೆರಿ ಬೆಸ್ಟ್ : ಸ್ವಲ್ಪ ಸಿಹಿ ಮತ್ತು ಸ್ವಲ್ಪ ಹುಳಿ ಸ್ಟ್ರಾಬೆರಿಗಳಲ್ಲಿ ಸಕ್ಕರೆ ಅಧಿಕವಾಗಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ, 100 ಗ್ರಾಂ ಸ್ಟ್ರಾಬೆರಿಗಳಲ್ಲಿ ಕೇವಲ 7 ಗ್ರಾಂ ಸಕ್ಕರೆ ಇರುತ್ತದೆ. ಆದ್ದರಿಂದ, ಮಧುಮೇಹಿಗಳು ಅವುಗಳನ್ನು ಹಿಂಜರಿಕೆಯಿಲ್ಲದೆ ತಿನ್ನಬಹುದು ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.

ಆವಕಾಡೊ ಒಳ್ಳೆಯದು: ScienceDirect.com ಪ್ರಕಾರ, ಆವಕಾಡೊಗಳು ವಿಟಮಿನ್ ಸಿ, ಇ, ಕೆ ಮತ್ತು ಬಿ ಯನ್ನು ಹೊಂದಿರುತ್ತವೆ. ಅವು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ನಿಮ್ಮ ದೈನಂದಿನ ಆಹಾರದಲ್ಲಿ ಅವುಗಳನ್ನು ಸೇರಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಅವು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಸಹ ನಿಯಂತ್ರಿಸುತ್ತವೆ. ಅರ್ಧ ಆವಕಾಡೊದಲ್ಲಿ ಕೇವಲ 0.66 ಗ್ರಾಂ ಸಕ್ಕರೆ ಇರುತ್ತದೆ. ಮಧುಮೇಹಿಗಳು ಪ್ರತಿದಿನ ಆವಕಾಡೊಗಳನ್ನು ತಿನ್ನಬೇಕೆಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.

ರಾಸ್‌ಬೆರ್ರಿಸ್: ಕ್ಯಾಲೋರಿಗಳಲ್ಲಿ ಬಹಳ ಕಡಿಮೆ. ಅವು ನಮ್ಮ ದೇಹಕ್ಕೆ ಅಗತ್ಯವಿರುವ ಜೀವಸತ್ವಗಳು, ಖನಿಜಗಳು ಹಾಗೂ ಉತ್ಕರ್ಷಣ ನಿರೋಧಕಗಳಲ್ಲಿಯೂ ಸಮೃದ್ಧವಾಗಿವೆ. ಇದರಿಂದ ಪ್ರತಿದಿನ ರಾಸ್‌ಬೆರ್ರಿಸ್ ತಿನ್ನುವುದು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅವುಗಳನ್ನು ಸೇವಿಸುವುದು ಆರೋಗ್ಯಕರ ಹೃದಯವನ್ನು ಕೂಡ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ತಜ್ಞರು ಹೇಳುವಂತೆ ಅವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ರಾಸ್‌‌ಬೆರ್ರಿಸ್ ಆಂಥೋಸಯಾನಿನ್ಸ್ ಎಂಬ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 100 ಗ್ರಾಂ ರಾಸ್‌ಬೆರ್ರಿಸ್ ಕೇವಲ 4.4 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ, ಅದಕ್ಕಾಗಿಯೇ ತಜ್ಞರು ಮಧುಮೇಹಿಗಳಿಗೆ ರಾಸ್‌ಬೆರ್ರಿಸ್ ಸೇವಿಸಲು ಸಲಹೆ ನೀಡುತ್ತಾರೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

sambrama prabha editor suresh kt

LEAVE A REPLY

Please enter your comment!
Please enter your name here