EC ಬೇಜವಾಬ್ದಾರಿ ಸಂಸ್ಧೆ: ಸ್ವತಂತ್ರ ಸಂಸ್ಥೆಗಳನ್ನು ಪ್ರಧಾನಿ ಮೋದಿ ನಾಶಪಡಿಸಿದ್ದಾರೆ 

0
42

Updated By: Priyalachhi

ಬೆಂಗಳೂರು: ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅವರು ದೇಶದಲ್ಲಿನ ಎಲ್ಲಾ ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆಗಳನ್ನು ನಾಶಪಡಿಸಿದ್ದಾರೆ. ಚುನಾವಣಾ ಆಯೋಗ ಸೇರಿದಂತೆ ಅವುಗಳನ್ನು ಕೇಂದ್ರ ಸರ್ಕಾರದ ತನ್ನ ಕೈಗೊಂಬೆಯನ್ನು ಆಡಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬಿಜೆಪಿ ‘ಮತ ಕಳ್ಳತನದಲ್ಲಿ ಪರಿಣಿತರು’ ಎಂದು ಸಾಬೀತುಪಡಿಸಿದೆ ಎಂದು ಹೇಳಿರುವ ಸಿಎಂ, ಕೇಂದ್ರ ಮತ್ತು ಹಲವಾರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಇದೇ ಕಾರಣ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷವು ತನ್ನ ಸಹಿ ಅಭಿಯಾನದ ಭಾಗವಾಗಿ ರಾಜ್ಯದಲ್ಲಿ ‘ಮತ ಕಳ್ಳತನ’ದ ವಿರುದ್ಧ 1.12 ಕೋಟಿಗೂ ಹೆಚ್ಚು ಸಹಿಗಳನ್ನು ಸಂಗ್ರಹಿಸಿದೆ ಎಂದು ಘೋಷಿಸಿದರು. ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ಕೇವಲ ಪರಿಣತರಲ್ಲ, ಸುಳ್ಳು ಅವರ ಮನೆ ದೇವರು. ಅವರು ಅದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಮತ ಕಳ್ಳತನದಲ್ಲಿ ಪರಿಣಿತರು ಎಂದು ಸಾಬೀತುಪಡಿಸಿದ್ದಾರೆ. ಮತ ಕಳ್ಳತನ ಅವರ ವೃತ್ತಿಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮತ ಕಳ್ಳತನದ ಮೂಲಕ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಗೆದ್ದಿದೆ. ಕೇಂದ್ರ ಮತ್ತು ಹಲವಾರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣದಲ್ಲಿ ಅವುಗಳನ್ನು ಪುರಾವೆಗಳೊಂದಿಗೆ ಬಹಿರಂಗಪಡಿಸಿದ್ದಾರೆ ಎಂದು ಹೇಳಿದರು.

sambrama prabha editor suresh kt

LEAVE A REPLY

Please enter your comment!
Please enter your name here