ಕೆಇಎ ನೇಮಕಾತಿ: ಕೆಎಸ್​ಎಸ್​ಐಡಿಸಿ ಹುದ್ದೆಗಳ ಅರ್ಜಿ ಸಲ್ಲಿಕೆಗೆ ನ.14 ಕಡೇಯ ದಿನಾಂಕ

0
61

Updated By: Priyalachhi

ಬೆಂಗಳೂರು: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ (ಕೆಎಸ್​ಎಸ್​ಐಡಿಸಿ) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇನ್ನೂ ಮೂರು ದಿನ ಅವಕಾಶವಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಯಿಂದ ಕೆಎಸ್​ಎಸ್​ಐಡಿಸಿಯಲ್ಲಿ ಖಾಲಿ ಇರುವ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ಎಫ್​ಡಿಎ, ಎಸ್​ಡಿಎ ಸೇರಿದಂತೆ ಒಟ್ಟು 44 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್​ 31 ಇದ್ದ ಅಂತಿಮ ದಿನವನ್ನು ವಿಸ್ತರಿಸಿ ನವೆಂಬರ್​ 14ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.Karnataka State Small Industries Development Corporation Ltd recruitment

ಹುದ್ದೆಗಳ ವಿವರ:

  • ವ್ಯವಸ್ಥಾಪಕರು (ಗ್ರೂಪ್​ ಎ)- 4
  • ಸಹಾಯಕ ವ್ಯವಸ್ಥಾಪಕರು (ಗ್ರೂಪ್​ ಬಿ) – 5
  • ಹಿರಿಯ ಸಹಾಯಕರು (ಗ್ರೂಪ್​- ಸಿ) – 5
  • ಕಿರಿಯ ಸಹಾಯಕರು (ಗ್ರೂಪ್​- ಸಿ) – 13
  • ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್​) (ಗ್ರೂಪ್)ಎ – 1
  • ಸಹಾಯಕ ಅಭಿಯಂತರರು (ಸಿವಿಲ್​) (ಗ್ರೂಪ್​ ಬಿ) 3
  • ಸಹಾಯಕ ಅಭಿಯಂತರರು (ವಿದ್ಯುತ್​) (ಗ್ರೂಪ್​ ಬಿ)- 2

ಹೈದರಾಬಾದ್​ ಕರ್ನಾಟಕ ಅಭ್ಯರ್ಥಿಗಳಿಗೆ 11 ಹುದ್ದೆಗಳನ್ನು ಮೀಸಲಾಗಿಟ್ಟಿದ್ದು, ಹುದ್ದೆಗಳ ಸಂಖ್ಯೆ ಕುರಿತು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಪರಿಶೀಲಿಸಬಹುದು.

ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ಪದವಿ, ಸ್ನಾತಕೋತ್ತರ ಪದವಿ, ಬಿಇ, ಬಿಟೆಕ್​ ಪದವಿ ಹೊಂದಿರಬೇಕು.

ವಯೋಮಿತಿ: ಕನಿಷ್ಠ ವಯೋಮಿತಿ 18 ವರ್ಷ ಗರಿಷ್ಠ ವಯೋಮಿತಿ 38 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಪ.ಜಾ, ಪ.ಪಂ ಮತ್ತು ನಿವೃತ್ತ ಸೇವಾಧರರಿಗೆ 500 ರೂ ಹಾಗೂ ಇತರೆ ಅಭ್ಯರ್ಥಿಗಳಿಗೆ 750 ರೂ ಅರ್ಜಿ ಶುಲ್ಕ ವಿಧಿಸಲಾಗುವುದು.

ಅಭ್ಯರ್ಥಿಗಳನ್ನು ಎರಡು ಪತ್ರಿಕೆಗಳ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೇಯ ದಿನ ನವೆಂಬರ್​ 14.

ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣವಾದ cetonline.karnataka.gov.in ಭೇಟಿ ನೀಡಬಹುದು.

RRB ನೇಮಕಾತಿ: ರೈಲ್ವೆ ನೇಮಕಾತಿ ಮಂಡಳಿಗಳು (RRBs) ಬೃಹತ್​ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿವೆ. ತಾಂತ್ರಿಕೇತರ ವರ್ಗ (ಎನ್​ಟಿಪಿಸಿ) ಹುದ್ದೆಗಳಿಗೆ ಭರ್ತಿಗೆ ದೇಶದೆಲ್ಲೆಡೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ತಾಂತ್ರಿಕೇತರ ಹುದ್ದೆಗಳನ್ನು ಎರಡು ಹಂತದಲ್ಲಿ ಭರ್ತಿ ಮಾಡಲಾಗುತ್ತಿದ್ದು, 5,817 ಪದವೀಧರ ಹುದ್ದೆಗಳನ್ನು ಹಾಗೂ 3058 ಹುದ್ದೆಗಳು ಅಂಡರ್​ ಗ್ರಾಜುಯೇಟ್​ ಹುದ್ದೆಗಳಾಗಿದ್ದು, ಒಟ್ಟು 8,860 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.

sambrama prabha editor suresh kt

LEAVE A REPLY

Please enter your comment!
Please enter your name here