ದೆಹಲಿಯಿಂದ ವಾಪಸಾದ ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದೇನು?

0
53

Updated By: Priyalachhi

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಬಗ್ಗೆ ಕೂಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಪಕ್ಷದ ಹೈಕಮಾಂಡ್ ಕುಳಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

ಇಂದು ದೆಹಲಿಯಿಂದ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಚೆಲುವರಾಯಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಕೂಗಿದ್ದು, ಯಾವುದಾರೂ ಒಂದು ಆಗುತ್ತದೆ. ಸಿಎಂ-ಡಿಸಿಎಂ ಮತ್ತು ಹೈಕಮಾಂಡ್ ಕುಳಿತು ಬಗೆಹರಿಸಲಿದ್ದಾರೆ ಎಂದರು.

ಮಾಧ್ಯಮ ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗ. ಊಹಾಪೋಹಗಳನ್ನು ಮೀರಿ ಸುದ್ದಿ ಮಾಡಲಾಗುತ್ತಿದೆ. ಇದು ದೇಶದ ವ್ಯವಸ್ಥೆಯಲ್ಲಿ ದುರದೃಷ್ಟಕರ, ನಿಮ್ಮ ಮೇಲೆ ಕೇಸ್ ಹಾಕಲು ಆಗುವುದಿಲ್ಲ ಎಂದು ಮಾಧ್ಯಮದ ವಿರುದ್ಧ ಸಚಿವರು ಬೇಸರ ವ್ಯಕ್ತಪಡಿಸಿದರು.

ನಾನು ದೆಹಲಿಗೆ ಹೋಗಿದ್ದು ನೂರಕ್ಕೆ ನೂರು ಕೃಷಿಗೆ ಸಂಬಂಧಿಸಿದ ವಿಚಾರಕ್ಕೆ. MSP ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದೆ, ಇಂದು ಬೆಳಗ್ಗೆ ವಿಡಿಯೋ ಕಾನ್ಸರೆನ್ಸ್​ನಲ್ಲಿ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಅಲ್ಲಿ ಯಾವ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿಲ್ಲ ಎಂದರು.

ದೆಹಲಿಯಲ್ಲಿ ವರಿಷ್ಠರಾದ ವೇಣುಗೋಪಾಲ್, ಸುರ್ಜೆವಾಲ, ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿಲ್ಲ. ಆದರೆ, ನಾನು ಬರುವ ಫ್ಲೈಟ್​​ನಲ್ಲಿ ಅಧ್ಯಕ್ಷರಾದ ಖರ್ಗೆ ಅವರೂ ಸಹ ಇದ್ದರು. ಈ ವೇಳೆ ಅವರ ಪಕ್ಕದಲ್ಲಿ ಕುಳಿತು ಎರಡು ನಿಮಿಷ ಮಾತನಾಡಿದೆ, ನನಗಿಂತ ಹೆಚ್ಚಾಗಿ ರಾಜ್ಯದ ರಾಜಕೀಯ ಅವರಿಗೆ ಗೊತ್ತು, ರಾಜಕೀಯ ವಿಚಾರ ಅವರೊಂದಿಗೆ ಮಾತನಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ನಾನು ದೆಹಲಿಗೆ ಹೋದಾಗ ಶಾಸಕರು ಅಲ್ಲಿರುವುದು ನನಗೆ ಗೊತ್ತಿರಲಿಲ್ಲ. ಶಾಸಕ ರಂಗನಾಥ್ ಮತ್ತು ವಾಸು ಅಲ್ಲಿಯೇ ಇದ್ದಾರೆ. ಸಚಿವ ಸ್ಥಾನಕ್ಕಾಗಿ ಹೋಗಿದ್ದಾರಾ ಅಥವಾ ಮುಖಂಡರ ಪರವಾಗಿ ಹೋಗಿದ್ದಾರೋ ಈ ವಿಚಾರವಾಗಿ ಚರ್ಚೆ ಮಾಡಲು ನನಗೆ ಸಮಯ ಇರಲಿಲ್ಲ ಎಂದು ತಿಳಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here