Updated By: Priyalachhi
ಬೆಂಗಳೂರು: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ (ಕೆಎಸ್ಎಸ್ಐಡಿಸಿ) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇನ್ನೂ ಮೂರು ದಿನ ಅವಕಾಶವಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಯಿಂದ ಕೆಎಸ್ಎಸ್ಐಡಿಸಿಯಲ್ಲಿ ಖಾಲಿ ಇರುವ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ಎಫ್ಡಿಎ, ಎಸ್ಡಿಎ ಸೇರಿದಂತೆ ಒಟ್ಟು 44 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಇದ್ದ ಅಂತಿಮ ದಿನವನ್ನು ವಿಸ್ತರಿಸಿ ನವೆಂಬರ್ 14ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಹುದ್ದೆಗಳ ವಿವರ:
- ವ್ಯವಸ್ಥಾಪಕರು (ಗ್ರೂಪ್ ಎ)- 4
- ಸಹಾಯಕ ವ್ಯವಸ್ಥಾಪಕರು (ಗ್ರೂಪ್ ಬಿ) – 5
- ಹಿರಿಯ ಸಹಾಯಕರು (ಗ್ರೂಪ್- ಸಿ) – 5
- ಕಿರಿಯ ಸಹಾಯಕರು (ಗ್ರೂಪ್- ಸಿ) – 13
- ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್) (ಗ್ರೂಪ್)ಎ – 1
- ಸಹಾಯಕ ಅಭಿಯಂತರರು (ಸಿವಿಲ್) (ಗ್ರೂಪ್ ಬಿ) 3
- ಸಹಾಯಕ ಅಭಿಯಂತರರು (ವಿದ್ಯುತ್) (ಗ್ರೂಪ್ ಬಿ)- 2
ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ 11 ಹುದ್ದೆಗಳನ್ನು ಮೀಸಲಾಗಿಟ್ಟಿದ್ದು, ಹುದ್ದೆಗಳ ಸಂಖ್ಯೆ ಕುರಿತು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಪರಿಶೀಲಿಸಬಹುದು.
ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ಪದವಿ, ಸ್ನಾತಕೋತ್ತರ ಪದವಿ, ಬಿಇ, ಬಿಟೆಕ್ ಪದವಿ ಹೊಂದಿರಬೇಕು.
ವಯೋಮಿತಿ: ಕನಿಷ್ಠ ವಯೋಮಿತಿ 18 ವರ್ಷ ಗರಿಷ್ಠ ವಯೋಮಿತಿ 38 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಪ.ಜಾ, ಪ.ಪಂ ಮತ್ತು ನಿವೃತ್ತ ಸೇವಾಧರರಿಗೆ 500 ರೂ ಹಾಗೂ ಇತರೆ ಅಭ್ಯರ್ಥಿಗಳಿಗೆ 750 ರೂ ಅರ್ಜಿ ಶುಲ್ಕ ವಿಧಿಸಲಾಗುವುದು.
ಅಭ್ಯರ್ಥಿಗಳನ್ನು ಎರಡು ಪತ್ರಿಕೆಗಳ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೇಯ ದಿನ ನವೆಂಬರ್ 14.
ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣವಾದ cetonline.karnataka.gov.in ಭೇಟಿ ನೀಡಬಹುದು.
RRB ನೇಮಕಾತಿ: ರೈಲ್ವೆ ನೇಮಕಾತಿ ಮಂಡಳಿಗಳು (RRBs) ಬೃಹತ್ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿವೆ. ತಾಂತ್ರಿಕೇತರ ವರ್ಗ (ಎನ್ಟಿಪಿಸಿ) ಹುದ್ದೆಗಳಿಗೆ ಭರ್ತಿಗೆ ದೇಶದೆಲ್ಲೆಡೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ತಾಂತ್ರಿಕೇತರ ಹುದ್ದೆಗಳನ್ನು ಎರಡು ಹಂತದಲ್ಲಿ ಭರ್ತಿ ಮಾಡಲಾಗುತ್ತಿದ್ದು, 5,817 ಪದವೀಧರ ಹುದ್ದೆಗಳನ್ನು ಹಾಗೂ 3058 ಹುದ್ದೆಗಳು ಅಂಡರ್ ಗ್ರಾಜುಯೇಟ್ ಹುದ್ದೆಗಳಾಗಿದ್ದು, ಒಟ್ಟು 8,860 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.



