ಪ್ರೀಮಿಯಂ ಪೆಟ್ರೋಲ್ ದರ, ಜೆಟ್ ಇಂಧನದ ಬೆಲೆ ಏರಿಕೆ

0
30

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ನವದೆಹಲಿ: ವಿಮಾನ ಟರ್ಬೈನ್ ಇಂಧನ (ATF) ಅಂದರೆ ಜೆಟ್ ಇಂಧನದ ಬೆಲೆ ಇಂದು ಬುಧವಾರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿ, ಪ್ರತಿ ಕಿಲೋ ಲಿಟರ್‌ಗೆ 2.07 ಲಕ್ಷ ರೂಪಾಯಿಗೆ ತಲುಪಿದೆ. ಆದರೆ ದೇಶೀಯ ವಿಮಾನಯಾನ ಸಂಸ್ಥೆಗಳು ಈ ಭಾರೀ ಏರಿಕೆಯನ್ನು ನೇರವಾಗಿ ಹೊರುವ ಅವಶ್ಯಕತೆ ಇಲ್ಲದಂತೆ ಒಂದು ವ್ಯವಸ್ಥೆ ರೂಪಿಸುವ ಕಾರ್ಯ ನಡೆಯುತ್ತಿದೆ.

ಇದರ ಜೊತೆಗೆ, ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಾಗತಿಕ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ವಾಣಿಜ್ಯ ಎಲ್‌ಪಿಜಿ ದರವನ್ನು ಪ್ರತಿ ಸಿಲಿಂಡರ್‌ಗೆ 195.50 ರೂಪಾಯಿ ಹೆಚ್ಚಿಸಲಾಗಿದೆ.

ದೆಹಲಿ ನಗರದಲ್ಲಿ ATF ದರವನ್ನು ಪ್ರತಿ ಕಿಲೋ ಲಿಟರ್‌ಗೆ 1,10,703.08 (114.5ಶೇಕಡಾ) ಹೆಚ್ಚಿಸಿ 2,07,341.22 ರೂಪಾಯಿಗೆ ಏರಿಸಲಾಗಿದೆ ಎಂದು ಸರ್ಕಾರಿ ತೈಲ ಮಾರಾಟ ಕಂಪನಿಗಳು ತಿಳಿಸಿವೆ.

ATF ಸಂಪೂರ್ಣವಾಗಿ ನಿಯಂತ್ರಣಮುಕ್ತ (ಡಿರೆಗ್ಯುಲೇಟೆಡ್) ಉತ್ಪನ್ನವಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗಳನ್ನು ಆಧರಿಸಿ ದರ ನಿಗದಿ ಮಾಡಲಾಗುತ್ತದೆ. ಇದು ವಿಮಾನಯಾನ ಸಂಸ್ಥೆಗಳೊಂದಿಗೆ ಹೊಂದಾಣಿಕೆಯ ಒಪ್ಪಂದದ ಪ್ರಕಾರವಾಗಿದೆ.

sambrama prabha editor suresh kt

LEAVE A REPLY

Please enter your comment!
Please enter your name here