ಬಿಡದಿ ಟೌನ್‌ಶಿಪ್ ಯೋಜನೆ: ಚರ್ಚೆಗೆ ಸಿದ್ಧ, ದಿನ ನಿಗದಿಪಡಿಸಿ; HDKಗೆ ಡಿಕೆಶಿ ಪ್ರತಿ ಸವಾಲು

0
72

Updated By: Priyalachhi

ಬೆಂಗಳೂರು: ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲು ಸಿದ್ಧನಿದ್ದೇನೆಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಹೇಳಿದ್ದಾರೆ.

ಕನಕಪುರ ಸಮೀಪದ ರಾಮ ಮಂದಿರ ಉದ್ಘಾಟನೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಡದಿ ಟೌನ್‌ಶಿಪ್ ಬಗ್ಗೆ ಕುಮಾರಸ್ವಾಮಿಯವರೊಂದಿಗೆ ಚರ್ಚೆಗೆ ನಾನು ಸಿದ್ಧ. ದಿನಾಂಕವನ್ನು ಮಾಧ್ಯಮವೇ ನಿಗದಿ ಮಾಡಲಿ. ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಚರ್ಚೆಗೆ ನಾನು ಸಮ್ಮತಿಸಿದ್ದೆ. ಈಗಲೂ ಅವರನ್ನೇ ಚರ್ಚೆಗೆ ಆಹ್ವಾನಿಸುತ್ತಿದ್ದೇನೆಂದು ಪ್ರತಿ ಸವಾಲು ಹಾಕಿದರು.

ಕುಮಾರಸ್ವಾಮಿ ಚರ್ಚೆಗೆ ಯಾವಾಗ ಸಿದ್ಧರಿರುತ್ತಾರೋ ಆಗ ನಾನು ಸಿದ್ಧ. ಮೂರು ದಿನಗಳ ಮುಂಚಿತವಾಗಿ ತಿಳಿಸಿದರೆ ಸಾಕು, ಚರ್ಚೆಗೆ ಬರಲು ಸಮಯ ಮಾಡಿಕೊಳ್ಳುತ್ತೇನೆ. ಈ ಯೋಜನೆ ರಾಜಕೀಯದ ವಿಷಯವಾಗುತ್ತಿದೆ. ಈ ಯೋಜನೆಯನ್ನು ಆರಂಭಿಸಿದ್ದು ನಾನಲ್ಲ, ಕುಮಾರಸ್ವಾಮಿಯವರೇ ಎಂದು ಹೇಳಿದರು.

ಬಿಡದಿ ಟೌನ್‌ಶಿಪ್ ಯೋಜನೆಗೆ ತಾನು ಅವಕಾಶ ನೀಡುವುದಿಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ, “ರೈತರಿಗೆ 800 ಚದರ ಅಡಿ ಭೂಮಿ ನೀಡುವುದಾಗಿ ಕುಮಾರಸ್ವಾಮಿಯವರೇ ಭರವಸೆ ನೀಡಿದ್ದರು. ಈಗ ನಾವು ಆ ಯೋಜನೆಯನ್ನು ಮುಂದುವರಿಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here