Updated By: Priyalachhi
ನವದೆಹಲಿ: ಈ ಚಳಿಗಾಲದಲ್ಲಿ ಈರುಳ್ಳಿ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿರುವುದರಿಂದ ರೈತರು ಮತ್ತು ವ್ಯಾಪಾರಿಗಳಿಗೆ ದಿಕ್ಕು ತೋಚದಂತಾಗಿದೆ.
ಬಾಂಗ್ಲಾದೇಶಕ್ಕೆ ಈರುಳ್ಳಿ ರಫ್ತು ನಿಷೇಧ ಜಾರಿಯಲ್ಲಿರುವುದರಿಂದ ದೇಶಿಯ ಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವೆಂದು ಘಾಜಿಪುರ ಮಂಡಿಯ ವ್ಯಾಪಾರಿಗಳು ಹೇಳಿದ್ದಾರೆ.
ಪ್ರಸ್ತುತ ನಾಸಿಕ್, ಅಲ್ವಾರ್, ಮಧ್ಯಪ್ರದೇಶ ಮತ್ತು ಬೆಂಗಳೂರು ಸೇರಿದಂತೆ ಇತರ ಸ್ಥಳಗಳಿಂದ ಬಂದ ಈರುಳ್ಳಿ ಮಾರುಕಟ್ಟೆಯಲ್ಲಿದೆ. ಇಳುವರಿಯೂ ಚೆನ್ನಾಗಿದೆ. ಈರುಳ್ಳಿ ರಫ್ತು ನಿಷೇಧದಿಂದಾಗಿ, ಘಾಜಿಪುರ ಮಂಡಿಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿಗೆ ಹೋಲ್ಸೇಲ್ ಬೆಲೆ ಕೆ.ಜಿಗೆ 2 ರೂ. ನಿಂದ 13 ರೂ. ವರೆಗೆ ಇದೆ” ಎಂದು ಘಾಜಿಪುರ ಮಂಡಿಯ ಈರುಳ್ಳಿ ವ್ಯಾಪಾರಿ ಪರಮಾನಂದ ಸೈನಿ ತಿಳಿಸಿದರು.
ಬೆಳೆಗೆ ಖರ್ಚು ಮಾಡಿದ ಹಣವೂ ರೈತರಿಗೆ ಸಿಗುತ್ತಿಲ್ಲ. ಕಡಿಮೆ ದರಕ್ಕೆ ಈರುಳ್ಳಿ ಮಾರಾಟ ಮಾಡಬೇಕಿರುವುದರಿಂದ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಅವರು ಕಮಿಷನ್ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ ಮತ್ತು ಬೆಳೆಗೆ ಹೂಡಿಕೆ ಮಾಡಿದ್ದ ಬಂಡವಾಳವನ್ನು ಸಹ ಭರಿಸಬೇಕಾಗುತ್ತದೆ. 50 ಕೆ.ಜಿ ಈರುಳ್ಳಿ ಚೀಲಕ್ಕೆ ಕೇವಲ 100 ರೂ. ರಿಂದ 120 ರೂ. ಬೆಲೆ ಇದೆ ಎಂದು ಹೇಳಿದರು.



