ದಾಸನ ‘ದಿ ಡೆವಿಲ್​’​ ಚಿತ್ರಕ್ಕೆ ಪ್ರೇಕ್ಷಕರು ಕೊಟ್ಟ ವಿಮರ್ಶೆಗಳಿವು!

0
69

Updated By: Priyalachhi

ಫೈನಲಿಕೋಟ್ಯಂತರ ಅಭಿಮಾನಿಗಳ ಕಾತರ ಕೊನೆಗೊಂಡಿದೆ. ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ತೂಗುದೀಪ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ​ ‘ದಿ ಡೆವಿಲ್​​’ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆ ಆಗಿದೆ. ಇಂದು ಮುಂಜಾನೆ 6:30ರ ಮಾರ್ನಿಂಗ್ ಶೋನೊಂದಿಗೆ ಸಿನಿಮಾ ಒಳ್ಳೆ ಓಪನಿಂಗ್​ ಪಡೆದುಕೊಂಡಿದೆ.

ನಿರ್ದೇಶಕ-ನಿರ್ಮಾಪಕ ಪ್ರಕಾಶ್​ ವೀರ್ ಸಾರಥ್ಯದ ಸಿನಿಮಾ ಆರಂಭಿಕವಾಗಿ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣ ವೇದಿಕೆಯಾದ ಎಕ್ಸ್​ನಲ್ಲಿ ವೀಕ್ಷಕರು ತಮ್ಮ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ”ದಿ ಡೆವಿಲ್​​, ಬ್ಲಾಕ್​ಬಸ್ಟರ್”​ ಅನ್ನೋ ಟ್ವೀಟ್​ ಹೇರಳವಾಗಿವೆ.

ಚಿತ್ರಮಂದಿರಗಳಲ್ಲಿ ಇದ್ರೆ ನೆಮ್ದಿಯಾಗಿರ್ಬೇಕ್​​​ ಹಾಡಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ತಮ್ಮ ಮೆಚ್ಚಿನ ನಟನ ಮೇಲೆ ಪ್ರೀತಿಯ ಧಾರೆಯೆರೆದಿರುವ ವಿಡಿಯೋ ಹಂಚಿಕೊಂಡ ಅಭಿಮಾನಿಯೋರ್ವರು, ”ಏನೇ ಆಗೋಗ್ಲಿ, ನಿಮ್ಮನ್ನು ಬಿಡೋರ್ ನಾವಲ್ಲ, ದಿ ಡೆವಿಲ್​” ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಯೊಬ್ಬರು ಪ್ರತಿಕ್ರಿಯೆ ನೀಡಿ, ”ಬ್ಲಾಕ್​ಬಸ್ಟರ್, ಪ್ಯೂರ್​ ಫ್ಯಾಮಿಲಿ ಪ್ಯಾಕೇಜ್​​ ಎಂಟರ್​ಟೈನರ್​​, ಪಕ್ಕಾ ಪೈಸಾ ವಸೂಲ್​​” ಎಂದು ಬರೆದುಕೊಂಡಿದ್ದಾರೆ. ಇವರದ್ದೇ ಮತ್ತೊಂದು ಟ್ವೀಟ್​ನಲ್ಲಿ, ”ಡಿ ಬಾಸ್​​ ಕ್ಯಾರಕ್ಟರೈಸೇಶನ್​​ ಅಂಡ್​​​ ಆ್ಯಕ್ಟಿಂಗ್​​​ ಸೂಪರ್​​, ಸ್ಕ್ರೀನ್​ ಪ್ರೆಸೆನ್ಸ್​​​ – ಬಡಿದು ತಿಂದ್ಕೊಂಡವರೆ” ಎಂದು ತಿಳಿಸಲಾಗಿದೆ.

ಫೈನಲಿ, ನಾವು ಗೆದ್ವಿ. ಬ್ಲಾಕ್​ಬಸ್ಟರ್: ದರ್ಶನ್​ ಲುಕ್​​ ಮತ್ತು ಬಿಜಿಎಂ ಅನ್ನು ಹಾಡಿ ಹೊಗಳಿರುವ ಅಭಿಮಾನಿಯೋರ್ವರು, ”ಫೈನಲಿ, ನಾವು ಗೆದ್ವಿ. ಬ್ಲಾಕ್​ಬಸ್ಟರ್. ದಿ ಡೆವಿಲ್​​ ಫೈಯರ್​ (ಫೈಯರ್​ ಎಮೋಜಿಯೊಂದಿಗೆ), ಬಿಜಿಎಂ ಫೈಯರ್​, ಬಾಸ್​ ಲುಕ್​​ ಫೈಯರ್, ಆಲ್​​ ಓವರ್​ ಮೂವಿ ಸೈಕ್​​” ಎಂದು ಬರೆದುಕೊಂಡಿದ್ದಾರೆ.

ಪ್ರಕಾಶ್​ ವೀರ್​ಗೆ ಪ್ರಶಂಸೆಗಳ ಮಳೆ; ಡೈರೆಕ್ಟರ್ ಪ್ರಕಾಶ್​ ವೀರ್​ ಅವರ ನಿರ್ದೇಶನಾ ಶೈಲಿಗೂ ಪ್ರಶಂಸೆಯ ಮಳೆ ಹರಿದಿದೆ. ಟ್ವೀಟ್​ ಒಂದರಲ್ಲಿ, ”ಅತ್ಯುತ್ತಮ ಸ್ಕ್ರಿಪ್ಟ್‌ಗಾಗಿ ಧನ್ಯವಾದಗಳು ಪ್ರಕಾಶ್ ಸರ್. ಇನ್ಮೇಲೆ ಮಿಲನ ಪ್ರಕಾಶ್ ಅಲ್ಲಾ, ಡೆವಿಲ್ ಪ್ರಕಾಶ್ ಅಂತಾ ಕರೆಯೋದು ಕನ್ಫರ್ಮ್​​. ಈ ಚಿತ್ರದಲ್ಲಿ ನಟ ದರ್ಶನ್ ನಟನೆ ಉತ್ತುಂಗಕ್ಕೇರಿದೆ. ಈ ಡೆವಿಲ್​ ಕ್ಯಾರೆಕ್ಟರ್ ಮತ್ತು ಸಿನಿಮಾ ಬಹಳ ಕಾಲ ನೆನಪಿನಲ್ಲಿ ಉಳಿಯಲಿದೆ” ಎಂದು ತಿಳಿಸಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಸಖತ್​ ಸದ್ದು ಮಾಡುತ್ತಿರುವ ಈ ಸಿನಿಮಾಗೆ ಫುಲ್​​ ಮಾರ್ಕ್​​ ಸಿಕ್ಕಿಲ್ಲ. ಅಸಮಧಾನಗೊಂಡ ಪ್ರೇಕ್ಷಕರೋರ್ವರ ಟ್ವೀಟ್​​ನಲ್ಲಿ, ”ದಿ ಡೆವಿಲ್​​ನ ಮೊದಲಾರ್ಧದ ವಿಮರ್ಶೆ – ರುಟಿನ್​​ ಪೊಲಿಟಿಕಲ್​ ಡ್ರಾಮಾ – ಸೀನ್​​​ಗಳಲ್ಲಿ ಕನೆಕ್ಟಿವಿಟಿ ಇಲ್ಲ – ತುಂಬಾ ಅರ್ಜೆಂಟ್ ಅಲ್ಲಿ ಸಿನಿಮಾ ಎಡಿಟ್ ಮಾಡಿರೋ ತರ ಇದೆ – ಕಾಸ್ಟ್ಯೂಮ್ ಡಿಸೈನರ್ ಯಾರಪ್ಪ ಅದು? ಕೃಷ್ಣ ಪಾತ್ರ (ದರ್ಶನ್)ಕ್ಕೆ ಸರಿಯಾಗಿ ಹೇರ್ ವಿಗ್ ಸೆಲೆಕ್ಟ್ ಮಾಡೋಕೆ ಆಗಿಲ್ಲ – ದರ್ಶನ್ ಸರ್​ದು ಕೆಲವೊಂದು ಕಡೆ ತುಂಬಾ ಬಲವಂತದ ಕಾಮಿಡಿ ಅನ್ಸುತ್ತೆ. ಡೆವಿಲ್​​ ಕ್ಯಾರೆಕ್ಟರ್​ ಅನ್ನು ತುಂಬಾ ಸ್ಟೈಲಿಶ್ ಆಗಿ ತೋರಿಸಿದ್ದಾರೆ. ಇಂಟರ್​​ವಲ್​ ಬ್ಲಾಕ್ ಚೆನ್ನಾಗಿದೆ. ಒಟ್ಟಾರೆ ಬಿಲೋ ಆವರೇಜ್​​. ಓರ್ವ ನ್ಯೂಟ್ರಲ್​ ಫ್ಯಾನ್​ ಆಗಿ, ಒಟ್ಟಾರೆ ಫಸ್ಟ್​ ಹಾಫ್​​ ಬಿಲೋ ಆವರೇಜ್​, ಫಸ್ಟ್ ಹಾಫ್​ ಅಷ್ಟೊಂದ್​ ಇಷ್ಟ ಆಗಿಲ್ಲ” ಎಂದು ತಿಳಿಸಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here