ದೇಶಾದ್ಯಂತ ಹೊಸ ವರ್ಷದ ಸಂಭ್ರಮ: ಕುಣಿದು ಕುಪ್ಪಳಿಸಿದ ಜನ

0
18

Updated By: Priyalachhi 

ದೆಹಲಿ: ವಿಶ್ವಾದ್ಯಂತ ಹೊಸ ವರ್ಷ 2026ರ ಹೊಸ ಹುರುಪು, ಹೊಸ ಉಲ್ಲಾಸ ಕಂಡುಬರುತ್ತಿದೆ. ಭಾರತದಾದ್ಯಂತ ಕಳೆದ ರಾತ್ರಿ ಕೋಟ್ಯಂತರ ಮಂದಿ ಹೊಸ ವರ್ಷದ ಸಂಭ್ರಮದಲ್ಲಿ ಮಿಂದೆದ್ದರು. ಗಡಿಯಾರದಲ್ಲಿ ಗಂಟೆಯ ಮುಳ್ಳು 12 ಎಂದು ತೋರಿಸುತ್ತಿದ್ದಂತೆ ಜನರ ಖುಷಿ ಮುಗಿಲು ಮುಟ್ಟಿತ್ತು. ಬಣ್ಣ ಬಣ್ಣದ ಪಟಾಕಿಗಳು ಆಗಸವನ್ನು ಬೆಳಗಿ ಚಿತ್ತಾರ ಮೂಡಿಸಿದವು. ಮಕ್ಕಳಿಂದ ಹಿಡಿದು ಹಿರಿಯವರೆಗೆ ಎಲ್ಲರೂ ಕುಣಿದು ಕುಪ್ಪಳಿಸಿದರು. ಬೀದಿಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಒಬ್ಬರಿಗೊಬ್ಬರು ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು, ಹೈದರಾಬಾದ್, ಅಮೃತಸರ ಸೇರಿದಂತೆ ದೇಶದೆಲ್ಲೆಡೆ ಹೊಸ ವರ್ಷದ ಆಗಮನವನ್ನು ಜನರು ಸಂಗೀತ ನೃತ್ಯಗಳಿಂದ ಸಂಭ್ರಮಿಸಿದರು.

ಗೋವಾದಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರು ಹೊಸ ವರ್ಷವನ್ನು ಸಂತೋಷ ಕೂಟಗಳಲ್ಲಿ ಭಾಗಿಯಾಗುವ ಆಚರಿಸಿದರು. ಪಟಾಕಿಗಳು ರಾತ್ರಿಯಾಕಾಶವನ್ನು ಬೆಳಗಿಸಿದವು.

ಮುಂಬೈನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ ಮಧ್ಯರಾತ್ರಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಸಂತಸದಲ್ಲಿ ಮಿಂದೆದ್ದರು.

sambrama prabha editor suresh kt

LEAVE A REPLY

Please enter your comment!
Please enter your name here