ಬಂಗಾಳದಲ್ಲಿ ಭ್ರಷ್ಟಾಚಾರ, ಒಳನುಸುಳುವಿಕೆ ಕೊನೆಗೊಳಿಸುತ್ತೇವೆ: ಅಮಿತ್ ಶಾ ಮನವಿ

0
31

Updated By: Priyalachhi 

ಕೋಲ್ಕತಾ: ಆಡಳಿತ ನಡೆಸಲು ಭಾರತೀಯ ಜನತಾ ಪಕ್ಷಕ್ಕೆ ಒಂದು ಅವಕಾಶ ಕೊಡಿ, ಭಯ, ಭ್ರಷ್ಟಾಚಾರ ಮತ್ತು ದುರಾಳಿತವನ್ನು ಉತ್ತಮ ಆಡಳಿತದೊಂದಿಗೆ ಬದಲಾಯಿಸುತ್ತೇವೆಂದು ಪಶ್ಚಿಮ ಬಂಗಾಳದ ಜನತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಮನವಿ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಇಂದಿನ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸೇರಿದಂತೆ ಇದುವರೆಗೆ ಆಡಳಿತ ನಡೆಸಿದ ಎಲ್ಲಾ ಪಕ್ಷಗಳಿಗೆ ಪರ್ಯಾಯವಾಗಿ ಬಿಜೆಪಿ ಹೊರಹೊಮ್ಮಿದೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ “ಚುನಾವಣಾ ಲಾಭಕ್ಕಾಗಿ ಬಾಂಗ್ಲಾದೇಶಿಗಳ ಒಳನುಸುಳುವಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನುಸುಳುಕೋರರನ್ನು ಗುರುತಿಸುವುದಷ್ಟೇ ಅಲ್ಲದೆ, ಅವರನ್ನು ಓಡಿಸುವ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದರು.

ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಪಶ್ಚಿಮ ಬಂಗಾಳದಲ್ಲಿ ಒಳನುಸುಳುವಿಕೆ ಹೆಚ್ಚಳವಾಗಿದೆ. ಬಂಗಾಳ ಗಡಿಯಲ್ಲಿ ನಡೆಯುತ್ತಿರುವ ಒಳನುಸುಳುವಿಕೆ ಬಂಗಾಳಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ, ಈಗ ಅದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ. ನಾವು ದೇಶದ ಸಂಸ್ಕೃತಿಯನ್ನು ಉಳಿಸಬೇಕು. ನಮ್ಮ ದೇಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾದರೆ, ಗಡಿಗಳನ್ನು ಮುಚ್ಚುವ ದೇಶಭಕ್ತಿಯ ಸರ್ಕಾರ ನಮಗೆ ಇಲ್ಲಿ ಬೇಕು. ಮಮತಾ ಬ್ಯಾನರ್ಜಿ ಇದನ್ನು ಮಾಡಲು ಸಾಧ್ಯವಿಲ್ಲ, ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

“ಬಂಗಾಳದ ಜನರು ಒಳನುಸುಳುವಿಕೆಯಿಂದ ಆತಂಕಗೊಂಡಿದ್ದಾರೆ. ನಾವು ಒಳನುಸುಳುವವರನ್ನು ಗುರುತಿಸುವುದಲ್ಲದೆ ಅವರನ್ನು ಓಡಿಸುತ್ತೇವೆ. ಮಮತಾ ಬ್ಯಾನರ್ಜಿ ಚುನಾವಣಾ ಲಾಭಕ್ಕಾಗಿ ಬಾಂಗ್ಲಾದೇಶಿಗಳ ಒಳನುಸುಳುವಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ, “ಪಶ್ಚಿಮ ಬಂಗಾಳ ಸರ್ಕಾರ ನಮಗೆ ಭೂಮಿ ನೀಡದ ಕಾರಣ ನಾವು ಬಾಂಗ್ಲಾದೇಶ ಗಡಿಯ ಬೇಲಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು,

sambrama prabha editor suresh kt

LEAVE A REPLY

Please enter your comment!
Please enter your name here