Updated By: Priyalachhi
ಬೆಂಗಳೂರು: ಬೆಂಗಳೂರಿನಲ್ಲಿ ವಾಸವಿರುವ ಹಲವು ಬಡವರಿಗೆ ಮನೆ ಇಲ್ಲ, ಆದರೆ, ಪರ ರಾಜ್ಯದ ಜನರಿಗೆ ಮನೆಗಳನ್ನು ನೀಡಲು ಸರ್ಕಾರ ಮುಂದಾಗಿದೆ ಇದು ಸರಿಯಲ್ಲ. ಕರ್ನಾಟಕ ರಾಜ್ಯದಲ್ಲಿ ಯಾರ ಸರ್ಕಾರ ನಡೆಯುತ್ತಿದೆ ಮತ್ತು ಯಾರಿಗಾಗಿ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಗಿಲು ಬಳಿ ಮನೆ ಧ್ವಂಸದ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಈ ಸರ್ಕಾರದ ಮೂಗುದಾರ ಎಲ್ಲಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಇಲ್ಲಿನ ಸರ್ಕಾರ ಹೇಗೆ ನಡೆಯಬೇಕು ಎಂದು ಕಿವಿ ಮಾತು ಹೇಳುತ್ತಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಹೀಗೆ ನಡೆಯಬೇಕು ಎಂದು ಹೇಳುತ್ತಾರೆ. ಹೀಗಿರುವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ಸರ್ಕಾರಕ್ಕೆ ನೈತಿಕತೆ ಇದೆಯೇ ಎಂದು ಟೀಕಿಸಿದರು
ಕೋಗಿಲನಲ್ಲಿ ಅಕ್ರಮ ವಲಸಿಗರ ಮನೆ ತೆರವು ಮಾಡಿರುವುದು ಸ್ವಾಗತಾರ್ಹ. ಈ ಬಗ್ಗೆ ಕೇರಳದ ಸಿಎಂ, ರಾಜ್ಯಸಭಾ ಸದಸ್ಯರು ಪ್ರಶ್ನೆ ಮಾಡುತ್ತಾರೆ ಅಂದರೆ ಏನರ್ಥ. ಕೇರಳ ಚುನಾವಣೆ ಹೇಗೆ ಪರಿಣಾಮ ಬೀರುತ್ತಿದೆ. ಯುಡಿಎಫ್, ಎಲ್‌ಡಿಎಫ್ ತಮ್ಮ ಸರ್ಕಾರದ ಬಗ್ಗೆ ನಿರ್ಧಾರ ಮಾಡುತ್ತದೆ ಎದು ಆಕ್ರೋಶ ಹೊರ ಹಾಕಿದರು.
ಹೆಬ್ಬಾಳದಲ್ಲಿ ನೆಲೆ ನಿಂತ ಅಕ್ರಮ ವಲಸಿಗರ ಬಗ್ಗೆ ನಾನು ಹಿಂದೆ ಸರ್ಕಾರದ ಗಮನ ಸೆಳೆದಿದ್ದೆ. ಸಚಿವ ಜಮೀರ್ ಅಹಮದ್ ಖಾನ್ ಅವರು, ರಾಜ್ಯದಲ್ಲಿ ಎಷ್ಟು ಜನರಿಗೆ ವೋಟರ್ ಐಡಿ ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಟ್ಟಿದ್ದಾರೆ ಹೇಳಲಿ. ಇವರೆಲ್ಲಾ ಸೇರಿಕೊಂಡು ಕರ್ನಾಟಕದ ಜಮಾಗ್ರಮಫಿಯನ್ನು ಬದಲಿಸಲು ಹೊಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಹೀಗೂ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ಹತ್ತು ವರ್ಷ ಹಿಂದೆ ಕಂಟ್ರೋಲ್ ಮೆಂಟ್ ರೈಲು ನಿಲ್ದಾಣಕ್ಕೆ ದೊಡ್ಡ ಗುಂಪು ಬಂದು ಇಳಿದ್ದನ್ನು ನಾವು ಪ್ರಶ್ನೆ ಮಾಡಲು ಹೋದಾಗ ಅಲ್ಲಿಗೆ ಮುಂದಾದ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ತಮ್ಮ ಬಸ್‌ನಲ್ಲಿ ಕರೆದೊಯ್ದರು. ಬಾಂಗ್ಲಾದಿಂದ ಬಂದಿದ್ದವರನ್ನು ಜಮೀರ್ ಅಹಮದ್ ಖಾನ್ ಇಲ್ಲಿ ಸೆಟಲ್ ಮಾಡಿದ್ದಾರೆ. ಈ ಬಗ್ಗೆಯೂ ತನಿಖೆ ಆಗಬೇಕು ಎಂದರು.



