Updated By: Priyalachhi
ಶ್ರೀಲಂಕಾದಲ್ಲಿ ಅಬ್ಬರಿಸುತ್ತಿರುವ ದಿತ್ವಾ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸುವ ಭೀತಿ ಎದುರಾಗಿದೆ. ಶ್ರೀಲಂಕಾದಲ್ಲಿ ಚಂಡಮಾರುತದಿಂದ ಎಫೆಕ್ಟ್ನಿಂದ ಇದುವರೆಗೂ 132 ಮಂದಿ ಸಾವನ್ನಪ್ಪಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಶ್ರೀಲಂಕಾದಲ್ಲಿ ವಿನಾಶವನ್ನ ಸೃಷ್ಟಿಸಿ ಭಾರತದ ತಮಿಳು ನಾಡಿನ ಕಡಲ ತೀರಕ್ಕೆ ಕಾಲಿಟ್ಟಿರುವ ದ್ವಿತಾ ಚಂಡಮಾರುತದ ಎಫೆಕ್ಟ್ ರಾಜ್ಯಕ್ಕೂ ತಟ್ಟಲಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.



