Updated By: Priyalachhi
ಬೆಂಗಳೂರು: ಹೊಸ ವರ್ಷದ ಮುನ್ನಾದಿನವೇ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರ್ಕಾರದ ಮಹತ್ವದ ಬದಲಾವಣೆ ಮಾಡಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 28 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿದರೆ, 20 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶಿಸಿದೆ.
ಐಜಿಪಿಯಾಗಿ ಮುಂಬಡ್ತಿ ಪಡೆದ ಅಧಿಕಾರಿಗಳು: ಡಾ.ಎಂ.ಬಿ.ಬೋರಲಿಂಗಯ್ಯ (ದಕ್ಷಿಣ ವಲಯ), ರಾಮ್ನಿವಾಸ್ ಸೆಪಟ್ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ), ಅನುಪಮಾ ಅಗರ್ವಾಲ್(ಸಿಆರ್ಪಿಎಫ್), ಅಜಯ್ ಹಿಲೋರಿ (ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು), ಡಾ.ರೋಹಿಣಿ ಕಟೋಚ್ ಸಪೆಟ್ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ).
ಡಿಐಜಿಯಾಗಿ ಮುಂಬಡ್ತಿ: ಡಾ.ಭೀಮಾಶಂಕರ್ ಎಸ್.ಗುಳೇದ್ (ಸಿಐಡಿ, ಆರ್ಥಿಕ ಅಪರಾಧ ವಿಭಾಗ), ನಿಕಂ ಪ್ರಕಾಶ್ ಅಮ್ರಿತ್ (ಕೇಂದ್ರ ಸೇವೆ), ಜಿ.ರಾಧಿಕಾ(ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ), ರಾಹುಲ್ ಕುಮಾರ್ ಶಹಪುರ್ವಾದ್ (ಎನ್ಐಎ, ದೆಹಲಿ), ಧರ್ಮೇಂದ್ರ ಕುಮಾರ್ ಮೀನಾ (ಕೇಂದ್ರ ಸೇವೆ), ಇಲಾಕಿಯಾ ಕರುಣಾಕರನ್ (ನಿಸ್ತಂತು ವಿಭಾಗ), ಡಾ.ಸಿ.ಬಿ.ವೇದಮೂರ್ತಿ (ಗುಪ್ತಚರ ವಿಭಾಗ), ಕೆ.ಎಂ.ಶಾಂತರಾಜು (ಐಎಸ್ಡಿ, ಬೆಂಗಳೂರು), ಹನುಮಂತರಾಯ (ಮಾನವ ಹಕ್ಕುಗಳ ಆಯೋಗ), ಡಿ.ದೇವರಾಜ್ (ಪೊಲೀಸ್ ತರಬೇತಿ), ಡಾ.ಡಿ.ಆರ್.ಸಿರಿಗೌರಿ (ಕರ್ನಾಟಕ ಲೋಕಾಯುಕ್ತ), ಡಾ.ಕೆ.ಧರಣಿದೇವಿ (ಗುಪ್ತಚರ ವಿಭಾಗ), ಎಸ್.ಸವಿತಾ (ಹೋಮ್ ಗಾರ್ಡ್), ಸಿ.ಕೆ.ಬಾಬಾ (ಕೆಎಸ್ಆರ್ಪಿ), ಅಬ್ದುಲ್ ಅಹದ್ (ಬಿಎಂಟಿಸಿ, ವಿಚಕ್ಷಣ ದಳ), ಎಸ್.ಗಿರೀಶ್ (ಮಾದಕ ವಸ್ತು ನಿಗ್ರಹ ಪಡೆ), ಎಂ.ಪುಟ್ಟಮಾದಯ್ಯ (ಪ್ರಾಂಶುಪಾಲರು, ಪೊಲೀಸ್ ತರಬೇತಿ ಶಾಲೆ, ಕಲಬುರಗಿ), ಟಿ.ಶ್ರೀಧರ್ (ಪೊಲೀಸ್ ಪ್ರಧಾನ ಕಚೇರಿ), ಎಂ.ಅಶ್ವಿನಿ (ಯುಎನ್ಎಂಐಎಸ್ಎಸ್), ಎ.ಎನ್.ಪ್ರಕಾಶ್ ಗೌಡ (ವಿಶೇಷ ಕಾರ್ಯಪಡೆ).



