Updated By: Priyalachhi
ಫೈನಲಿ, ಕೋಟ್ಯಂತರ ಅಭಿಮಾನಿಗಳ ಕಾತರ ಕೊನೆಗೊಂಡಿದೆ. ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆ ಆಗಿದೆ. ಇಂದು ಮುಂಜಾನೆ 6:30ರ ಮಾರ್ನಿಂಗ್ ಶೋನೊಂದಿಗೆ ಸಿನಿಮಾ ಒಳ್ಳೆ ಓಪನಿಂಗ್ ಪಡೆದುಕೊಂಡಿದೆ.
ನಿರ್ದೇಶಕ-ನಿರ್ಮಾಪಕ ಪ್ರಕಾಶ್ ವೀರ್ ಸಾರಥ್ಯದ ಸಿನಿಮಾ ಆರಂಭಿಕವಾಗಿ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣ ವೇದಿಕೆಯಾದ ಎಕ್ಸ್ನಲ್ಲಿ ವೀಕ್ಷಕರು ತಮ್ಮ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ”ದಿ ಡೆವಿಲ್, ಬ್ಲಾಕ್ಬಸ್ಟರ್” ಅನ್ನೋ ಟ್ವೀಟ್ ಹೇರಳವಾಗಿವೆ.
ಚಿತ್ರಮಂದಿರಗಳಲ್ಲಿ ಇದ್ರೆ ನೆಮ್ದಿಯಾಗಿರ್ಬೇಕ್ ಹಾಡಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ತಮ್ಮ ಮೆಚ್ಚಿನ ನಟನ ಮೇಲೆ ಪ್ರೀತಿಯ ಧಾರೆಯೆರೆದಿರುವ ವಿಡಿಯೋ ಹಂಚಿಕೊಂಡ ಅಭಿಮಾನಿಯೋರ್ವರು, ”ಏನೇ ಆಗೋಗ್ಲಿ, ನಿಮ್ಮನ್ನು ಬಿಡೋರ್ ನಾವಲ್ಲ, ದಿ ಡೆವಿಲ್” ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಯೊಬ್ಬರು ಪ್ರತಿಕ್ರಿಯೆ ನೀಡಿ, ”ಬ್ಲಾಕ್ಬಸ್ಟರ್, ಪ್ಯೂರ್ ಫ್ಯಾಮಿಲಿ ಪ್ಯಾಕೇಜ್ ಎಂಟರ್ಟೈನರ್, ಪಕ್ಕಾ ಪೈಸಾ ವಸೂಲ್” ಎಂದು ಬರೆದುಕೊಂಡಿದ್ದಾರೆ. ಇವರದ್ದೇ ಮತ್ತೊಂದು ಟ್ವೀಟ್ನಲ್ಲಿ, ”ಡಿ ಬಾಸ್ ಕ್ಯಾರಕ್ಟರೈಸೇಶನ್ ಅಂಡ್ ಆ್ಯಕ್ಟಿಂಗ್ ಸೂಪರ್, ಸ್ಕ್ರೀನ್ ಪ್ರೆಸೆನ್ಸ್ – ಬಡಿದು ತಿಂದ್ಕೊಂಡವರೆ” ಎಂದು ತಿಳಿಸಲಾಗಿದೆ.
ಫೈನಲಿ, ನಾವು ಗೆದ್ವಿ. ಬ್ಲಾಕ್ಬಸ್ಟರ್: ದರ್ಶನ್ ಲುಕ್ ಮತ್ತು ಬಿಜಿಎಂ ಅನ್ನು ಹಾಡಿ ಹೊಗಳಿರುವ ಅಭಿಮಾನಿಯೋರ್ವರು, ”ಫೈನಲಿ, ನಾವು ಗೆದ್ವಿ. ಬ್ಲಾಕ್ಬಸ್ಟರ್. ದಿ ಡೆವಿಲ್ ಫೈಯರ್ (ಫೈಯರ್ ಎಮೋಜಿಯೊಂದಿಗೆ), ಬಿಜಿಎಂ ಫೈಯರ್, ಬಾಸ್ ಲುಕ್ ಫೈಯರ್, ಆಲ್ ಓವರ್ ಮೂವಿ ಸೈಕ್” ಎಂದು ಬರೆದುಕೊಂಡಿದ್ದಾರೆ.
ಪ್ರಕಾಶ್ ವೀರ್ಗೆ ಪ್ರಶಂಸೆಗಳ ಮಳೆ; ಡೈರೆಕ್ಟರ್ ಪ್ರಕಾಶ್ ವೀರ್ ಅವರ ನಿರ್ದೇಶನಾ ಶೈಲಿಗೂ ಪ್ರಶಂಸೆಯ ಮಳೆ ಹರಿದಿದೆ. ಟ್ವೀಟ್ ಒಂದರಲ್ಲಿ, ”ಅತ್ಯುತ್ತಮ ಸ್ಕ್ರಿಪ್ಟ್ಗಾಗಿ ಧನ್ಯವಾದಗಳು ಪ್ರಕಾಶ್ ಸರ್. ಇನ್ಮೇಲೆ ಮಿಲನ ಪ್ರಕಾಶ್ ಅಲ್ಲಾ, ಡೆವಿಲ್ ಪ್ರಕಾಶ್ ಅಂತಾ ಕರೆಯೋದು ಕನ್ಫರ್ಮ್. ಈ ಚಿತ್ರದಲ್ಲಿ ನಟ ದರ್ಶನ್ ನಟನೆ ಉತ್ತುಂಗಕ್ಕೇರಿದೆ. ಈ ಡೆವಿಲ್ ಕ್ಯಾರೆಕ್ಟರ್ ಮತ್ತು ಸಿನಿಮಾ ಬಹಳ ಕಾಲ ನೆನಪಿನಲ್ಲಿ ಉಳಿಯಲಿದೆ” ಎಂದು ತಿಳಿಸಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಸಿನಿಮಾಗೆ ಫುಲ್ ಮಾರ್ಕ್ ಸಿಕ್ಕಿಲ್ಲ. ಅಸಮಧಾನಗೊಂಡ ಪ್ರೇಕ್ಷಕರೋರ್ವರ ಟ್ವೀಟ್ನಲ್ಲಿ, ”ದಿ ಡೆವಿಲ್ನ ಮೊದಲಾರ್ಧದ ವಿಮರ್ಶೆ – ರುಟಿನ್ ಪೊಲಿಟಿಕಲ್ ಡ್ರಾಮಾ – ಸೀನ್ಗಳಲ್ಲಿ ಕನೆಕ್ಟಿವಿಟಿ ಇಲ್ಲ – ತುಂಬಾ ಅರ್ಜೆಂಟ್ ಅಲ್ಲಿ ಸಿನಿಮಾ ಎಡಿಟ್ ಮಾಡಿರೋ ತರ ಇದೆ – ಕಾಸ್ಟ್ಯೂಮ್ ಡಿಸೈನರ್ ಯಾರಪ್ಪ ಅದು? ಕೃಷ್ಣ ಪಾತ್ರ (ದರ್ಶನ್)ಕ್ಕೆ ಸರಿಯಾಗಿ ಹೇರ್ ವಿಗ್ ಸೆಲೆಕ್ಟ್ ಮಾಡೋಕೆ ಆಗಿಲ್ಲ – ದರ್ಶನ್ ಸರ್ದು ಕೆಲವೊಂದು ಕಡೆ ತುಂಬಾ ಬಲವಂತದ ಕಾಮಿಡಿ ಅನ್ಸುತ್ತೆ. ಡೆವಿಲ್ ಕ್ಯಾರೆಕ್ಟರ್ ಅನ್ನು ತುಂಬಾ ಸ್ಟೈಲಿಶ್ ಆಗಿ ತೋರಿಸಿದ್ದಾರೆ. ಇಂಟರ್ವಲ್ ಬ್ಲಾಕ್ ಚೆನ್ನಾಗಿದೆ. ಒಟ್ಟಾರೆ ಬಿಲೋ ಆವರೇಜ್. ಓರ್ವ ನ್ಯೂಟ್ರಲ್ ಫ್ಯಾನ್ ಆಗಿ, ಒಟ್ಟಾರೆ ಫಸ್ಟ್ ಹಾಫ್ ಬಿಲೋ ಆವರೇಜ್, ಫಸ್ಟ್ ಹಾಫ್ ಅಷ್ಟೊಂದ್ ಇಷ್ಟ ಆಗಿಲ್ಲ” ಎಂದು ತಿಳಿಸಿದ್ದಾರೆ.



