ರಾಹುಲ್​ ಗಾಂಧಿ ಅವರ ಲಡಾಖ್​ ಬಿಕ್ಕಟ್ಟಿನ ಕುರಿತ ಹೇಳಿಕೆ ಲೋಕಸಭೆಯಲ್ಲಿ ತೀವ್ರ ಗದ್ದಲ

0
30

Updated By: Priyalachhi

ನವದೆಹಲಿ: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯಲ್ಲಿನ ವಾಕ್ಯವನ್ನು ಉಲ್ಲೇಖಿಸಲು ಪ್ರಯತ್ನಿಸಿದ್ದು ಲೋಕಸಭೆಯಲ್ಲಿಂದು ಭಾರೀ ಗದ್ದಲ ಸೃಷ್ಟಿಸಿತು.

ರಾಹುಲ್​ ಗಾಂಧಿ ಅವರು ಲಡಾಖ್​ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಲು ಆರಂಭಿಸಿದಾಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪುಸ್ತಕ ಪ್ರಕಟವಾಗಿಲ್ಲ. ಅದರ ಮಾಹಿತಿ ಸುಳ್ಳಾಗಿದೆ. ಸದನದಲ್ಲಿ ಈ ಬಗ್ಗೆ ಚರ್ಚಿಸುವಂತಿಲ್ಲ ಎಂದರು.

ಆದರೂ, ರಾಹುಲ್ ಗಾಂಧಿ​ ಮಾಜಿ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಪ್ರಸ್ತಾಪಿಸಲು ಪದೇ ಪದೇ ಪ್ರಯತ್ನಿಸಿದರು. ಪುಸ್ತಕ ಪ್ರಕಟವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಕೇಳಿದರು.

ದಿ ಕ್ಯಾರವಾನ್ ನಿಯತಕಾಲಿಕೆಯು ಫೆಬ್ರವರಿಯಲ್ಲಿ ತನ್ನ ಮುಖಪುಟದಲ್ಲಿ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆಯ ಕುರಿತು ಪ್ರಕಟಿಸಿದೆ. ಇದು ಲಡಾಖ್​ ಕುರಿತು ಕೇಂದ್ರ ಸರ್ಕಾರ ಮತ್ತು ಚೀನಾದ ನಡುವಿನ ಗಡಿ ಬಿಕ್ಕಟ್ಟಿನ ಬಗ್ಗೆ ವಿವರಿಸಲಾಗಿದೆ ಎಂದು ಹೇಳಲಾಗಿದೆ.

ಇತ್ತ, ರಾಜನಾಥ್​ ಸಿಂಗ್​ ಅಪ್ರಕಟಿತ ಪುಸ್ತಕ ಮತ್ತು ನಿಯತಕಾಲಿಕೆಗಳಲ್ಲಿ ಬರೆದ ಮಾತ್ರಕ್ಕೆ ಅದನ್ನು ಸದನದಲ್ಲಿ ಮಂಡಿಸುವಂತಿಲ್ಲ. ಇದು ನಿಯಮಕ್ಕೆ ವಿರುದ್ಧ ಎಂದು ವಾದಿಸಿದರು. ಇದನ್ನು ಗೃಹ ಸಚಿವ ಅಮಿತ್​ ಶಾ ಬೆಂಬಲಿಸಿದರು.

sambrama prabha editor suresh kt

LEAVE A REPLY

Please enter your comment!
Please enter your name here