‘ಪಶ್ಚಿಮ ಏಷ್ಯಾ’ ಸಂಘರ್ಷದಿಂದ 25 ಲಕ್ಷ ಭಾರತೀಯರು ಬಡತನಕ್ಕೆ

0
5

ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು 2.5 ಮಿಲಿಯನ್ (25 ಲಕ್ಷ) ಭಾರತೀಯರನ್ನು ಬಡತನಕ್ಕೆ ತಳ್ಳಬಹುದು ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (UNDP) ಹೊಸ ವರದಿಯು ಎಚ್ಚರಿಕೆ ನೀಡಿದೆ. ಜೊತೆಗೆ ದೇಶವು ಮಾನವ ಅಭಿವೃದ್ಧಿ ಪ್ರಗತಿಯಲ್ಲಿ ಹಿನ್ನಡೆಯನ್ನು ಕಾಣುವ ಸಾಧ್ಯತೆಯಿದೆ.

ಸಂಘರ್ಷವು “ಏಷ್ಯಾ ಮತ್ತು ಪೆಸಿಫಿಕ್‌ನಾದ್ಯಂತ ಮಾನವ ಅಭಿವೃದ್ಧಿ ಒತ್ತಡಗಳನ್ನು ವಿಸ್ತರಿಸುತ್ತಿದೆ ಎಂದು ‘ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಸಂಘರ್ಷ’ ಏಷ್ಯಾ ಮತ್ತು ಪೆಸಿಫಿಕ್‌ನಲ್ಲಿ ಮಾನವ ಅಭಿವೃದ್ಧಿ ಪರಿಣಾಮಗಳು ಎಂಬ ತನ್ನ ವರದಿಯಲ್ಲಿ UNDP ಹೇಳಿದೆ.

“ಹೆಚ್ಚಿನ ಇಂಧನ, ಸರಕು ಮತ್ತಿತರ ವೆಚ್ಚವೂ ಮನೆಯ ಖರೀದಿ ಶಕ್ತಿಯನ್ನು ಕಡಿಮೆ ಮಾಡುತ್ತಿದ್ದು, ಆಹಾರ ಅಭದ್ರತೆಯನ್ನು ಹೆಚ್ಚಿಸುತ್ತಿದೆ. ಸಾರ್ವಜನಿಕ ಬಜೆಟ್‌ಗಳನ್ನು ತಗ್ಗಿಸುತ್ತಿದೆ ಮತ್ತು ಜೀವನೋಪಾಯವನ್ನು ದುರ್ಬಲಗೊಳಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಂಗಳವಾರ ಬಿಡುಗಡೆಯಾದ ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ, ಜಾಗತಿಕವಾಗಿ 8.8 ಮಿಲಿಯನ್ ಜನರನ್ನು ಬಡತನಕ್ಕೆ ತಳ್ಳಬಹುದು ಎಂದು ಅಂದಾಜಿಸಿದೆ. ಈ ಸಂಘರ್ಷ ಏಷ್ಯಾ-ಪೆಸಿಫಿಕ್ ಪ್ರದೇಶಕ್ಕೆ $299 ಬಿಲಿಯನ್ ವರೆಗೆ ನಷ್ಟವನ್ನುಂಟುಮಾಡಬಹುದು ಎಂದು ಎಚ್ಚರಿಸಿದೆ.

sambrama prabha editor suresh kt

LEAVE A REPLY

Please enter your comment!
Please enter your name here