ಐಟಿ ಸಿಟಿ ಬೆಂಗಳೂರಿನ ಮಕ್ಕಳು ಕಲಿಕೆಯಲ್ಲಿ ಹಿಂದೆ

0
67

Updated By: Priyalachhi

ಬೆಂಗಳೂರು: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಐಟಿ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರು ನಗರ ಮತ್ತು ರಾಜಧಾನಿಗೆ ಹತ್ತಿರದಲ್ಲಿಯೇ ಇರುವ ಬೆಂಗಳೂರು ಗ್ರಾಮೀಣ ಭಾಗದ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವು ಅತ್ಯಂತ ಕಡಿಮೆಯಾಗಿದ್ದು, ರಾಜ್ಯದ ಸರಾಸರಿಗಿಂತ ಕಡಿಮೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬಿಡುಗಡೆ ಮಾಡಿದ ಮಕ್ಕಳ ಹಕ್ಕುಗಳ ಸೂಚ್ಯಂಕ (CRI) ವರದಿ ತಿಳಿಸಿದೆ.

ಬೆಂಗಳೂರು ನಗರದಲ್ಲಿ 3 ರಿಂದ 5 ನೇ ತರಗತಿಯವರೆಗಿನ ಮಕ್ಕಳಲ್ಲಿ ಕೇವಲ ಶೇಕಡಾ 17.6 ರಷ್ಚು ಮಕ್ಕಳು ಮಾತ್ರ 2 ನೇ ತರಗತಿಯ ಪಠ್ಯಪುಸ್ತಕವನ್ನು ನಿರರ್ಗಳವಾಗಿ ಓದಬಲ್ಲರು ಎಂಬ ಆತಂಕಕಾರಿ ವಿಷಯ ವರದಿಯಿಂದ ಬಹಿರಂಗವಾಗಿದೆ. ಬೆಂಗಳೂರು ಗ್ರಾಮೀಣ ಮಕ್ಕಳಿಗೆ ಇದು ಶೇಕಡಾ 17.3 ರಷ್ಟಾಗಿದೆ. ಬೆಂಗಳೂರು ಗ್ರಾಮೀಣ ಭಾಗದ ಮಕ್ಕಳಲ್ಲಿ ಕೇವಲ 44.7% ಮತ್ತು ಬೆಂಗಳೂರು ನಗರದಲ್ಲಿ 49.7% ಮಕ್ಕಳು ಸರಳ ವ್ಯವಕಲನ ಸಮಸ್ಯೆಗಳನ್ನು ಪರಿಹರಿಸಬಲ್ಲರು. ಇದು ರಾಜ್ಯದ ಸರಾಸರಿ 34% ಕ್ಕಿಂತ ಕಡಿಮೆಯಾಗಿದೆ.

ಮಕ್ಕಳಲ್ಲಿ ಶಿಕ್ಷಣದ ಗುಣಮಟ್ಟ ತೀರಾ ಇಳಿಮುಖವಾಗಿರುವ ಜಿಲ್ಲೆಗಳಲ್ಲಿ ಶಿಕ್ಷಣ, ಮೂಲಸೌಕರ್ಯ ಮತ್ತು ಕಲಿಕಾ ವಿಧಾನಗಳ ಗುಣಮಟ್ಟವನ್ನು ಬಲಪಡಿಸುವಂತೆ ವರದಿ ಸೂಚಿಸಿದೆ. ಕೋವಿಡ್ -19 ಸಮಯದಲ್ಲಿ ಲಾಕ್‌ಡೌನ್ ಇದ್ದ ಕಾರಣ ಮಕ್ಕಳ ಓದುವ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ. ನಾಲ್ಕು ವರ್ಷಗಳ ನಂತರ, ಮಕ್ಕಳು ತಮ್ಮ ಕಲಿಕೆಯಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟವನ್ನು ತಲುಪಿಯೇ ಇಲ್ಲ ಎಂದು ವರದಿ ತಿಳಿಸಿದೆ.

Institute for Social and Economic Change ನ ಎಸ್ ಮಾದೇಶ್ವರನ್ ಮತ್ತು ಬಿ ಪಿ ವಾಣಿ ಅವರ ಅಧ್ಯಯನದಿಂದ ಈ ವರದಿ ಸಿದ್ಧಪಡಿಸಲಾಗಿದೆ. ಅವರು ವಾರ್ಷಿಕ ಶಿಕ್ಷಣ ಸ್ಥಿತಿ ವರದಿ 2024 ರ ಸಂಶೋಧನೆಗಳನ್ನು ಸಹ ಬಳಸಿಕೊಂಡಿದ್ದಾರೆ. ಗ್ರಾಮೀಣ ಕರ್ನಾಟಕದಲ್ಲಿ, 3 ನೇ ತರಗತಿಯ ಮಕ್ಕಳು 2 ನೇ ತರಗತಿಯ ಪಠ್ಯವನ್ನು ಓದಬಲ್ಲರು, ಅವರ ಶೇಕಡಾವಾರು ಪ್ರಮಾಣ ಗಂಡುಮಕ್ಕಳಲ್ಲಿ 32.4% ಮತ್ತು ಹೆಣ್ಣು ಮಕ್ಕಳಲ್ಲಿ 35.6% ಆಗಿದೆ. ಅದೇ ರೀತಿ, ವಿವಿಧ ವರ್ಗಗಳಲ್ಲಿ ಮಕ್ಕಳ ಗಣಿತದ ಸಾಮರ್ಥ್ಯವು ವರ್ಷಗಳಲ್ಲಿ ತುಂಬಾ ಕಳಪೆಯಾಗಿದೆ ಎಂದು ವರದಿ ಹೇಳಿದೆ.

sambrama prabha editor suresh kt

LEAVE A REPLY

Please enter your comment!
Please enter your name here