Updated By: Priyalachhi
ನವದೆಹಲಿ: ವಿವಿಧ ಸಂಸ್ಥೆಗಳು ಉಲ್ಲೇಖಿಸಿರುವ ಜಾಗತಿಕ ವಾಯು ಗುಣಮಟ್ಟದ ಶ್ರೇಯಾಂಕಗಳನ್ನು ಯಾವುದೇ ಅಧಿಕೃತ ಪ್ರಾಧಿಕಾರವು ನಡೆಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ವಾಯು ಗುಣಮಟ್ಟದ ಮಾರ್ಗಸೂಚಿಗಳು ಸಲಹಾ ಮೌಲ್ಯಗಳಾಗಿ ಮಾತ್ರ ಕಾರ್ಯನಿರ್ವಹಿಸುತ್ತವೆ. ಬದ್ಧ ಮಾನದಂಡಗಳಾಗಿ ಅಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ತಿಳಿಸಿದೆ.
ಐಕ್ಯೂಎಐಆರ್‌ನ ವಿಶ್ವ ವಾಯು ಗುಣಮಟ್ಟ ಶ್ರೇಯಾಂಕ, ಡಬ್ಲ್ಯುಹೆಚ್‌ಒ ಜಾಗತಿಕ ವಾಯು ಗುಣಮಟ್ಟ ದತ್ತಸಂಚಯ, ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (ಇಪಿಐ) ಮತ್ತು ಜಾಗತಿಕ ರೋಗಗಳ ಹೊರೆ (ಜಿಬಿಡಿ) ಮೆಟ್ರಿಕ್‌ಗಳಂತಹ ಜಾಗತಿಕ ಸೂಚ್ಯಂಕಗಳಲ್ಲಿ ಭಾರತದ ಸ್ಥಾನದ ಕುರಿತು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಿಸರ ಸಚಿವಾಲಯ, ವಿಶ್ವದಾದ್ಯಂತ ಯಾವುದೇ ಅಧಿಕೃತ ದೇಶವಾರು ಮಾಲಿನ್ಯ ಶ್ರೇಯಾಂಕವನ್ನು ಕೈಗೊಳ್ಳಲಾಗುವುದಿಲ್ಲ ಎಂದು ಹೇಳಿದೆ.
ಜಾಗತಿಕ ಸೂಚ್ಯಂಕಗಳಲ್ಲಿ ಭಾರತದ ಸ್ಥಾನದ ಕುರಿತು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಿಸರ ಸಚಿವಾಲಯ, ವಿಶ್ವಾದ್ಯಂತ ಯಾವುದೇ ಅಧಿಕೃತ ದೇಶವಾರು ಮಾಲಿನ್ಯ ಶ್ರೇಯಾಂಕವನ್ನು ಕೈಗೊಳ್ಳಲಾಗುವುದಿಲ್ಲ ಎಂದು ತಿಳಿಸಿದರು.
ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳು ದೇಶಗಳು ಭೌಗೋಳಿಕತೆ, ಪರಿಸರ ಪರಿಸ್ಥಿತಿಗಳು, ಹಿನ್ನೆಲೆ ಮಟ್ಟಗಳು ಮತ್ತು ರಾಷ್ಟ್ರೀಯ ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡು ದೇಶದ ಆದ ಮಾನದಂಡಗಳನ್ನು ಹೊಂದಿಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಗುಣಮಟ್ಟವನ್ನು ರಕ್ಷಿಸಲು ಭಾರತವು ಈಗಾಗಲೇ 12 ಮಾಲಿನ್ಯಕಾರಕಗಳಿಗೆ ರಾಷ್ಟ್ರೀಯ ಸುತ್ತುವರಿದ ವಾಯು ಗುಣಮಟ್ಟ ಮಾನದಂಡಗಳನ್ನು (ಎನ್ಎಎಕ್ಯೂಎಸ್) ಪ್ರಕಟಿಸಿದೆ ಎಂದು ಸದನಕ್ಕೆ ತಿಳಿಸಿದರು.
ಯಾವುದೇ ಜಾಗತಿಕ ಪ್ರಾಧಿಕಾರವು ದೇಶಗಳನ್ನು ಅಧಿಕೃತವಾಗಿ ಶ್ರೇಣೀಕರಿಸದಿದ್ದರೂ, ವಾಯು ಗುಣಮಟ್ಟ ಸುಧಾರಣಾ ಕ್ರಮಗಳ ಆಧಾರದ ಮೇಲೆ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (ಎನ್ಸಿಎಪಿ) ಅಡಿಯಲ್ಲಿ ಬರುವ 130 ನಗರಗಳನ್ನು ನಿರ್ಣಯಿಸಲು ಮತ್ತು ಶ್ರೇಣೀಕರಿಸಲು ತನ್ನದೇ ಆದ ವಾರ್ಷಿಕ ಸ್ವಚ್ಛ ವಾಯು ಸರ್ವೇಕ್ಷಣವನ್ನು ನಡೆಸುತ್ತದೆ. ಉತ್ತಮ ಪ್ರದರ್ಶನ ನೀಡುವ ನಗರಗಳನ್ನು ಪ್ರತಿ ವರ್ಷ ಸೆಪ್ಟಂಬರ್ 7 ರಂದು ರಾಷ್ಟ್ರೀಯ ಸ್ವಚ್ಛ ವಾಯು ದಿವಸ್‌ನಲ್ಲಿ ಸನ್ಮಾನಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.



