ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬಳ್ಳಾರಿ ಗಲಾಟೆ ವಿಚಾರದ ಕುರಿತು ಪ್ರತಿಕ್ರಿಯಿಸಿದ್ದಾರೆ.

0
55

Updated By: Priyalachhi 

ತುಮಕೂರು : ಬಳ್ಳಾರಿ ಗಲಾಟೆ ವಿಚಾರವಾಗಿ ಈಗಾಗಲೇ ನಾನು ಅಲ್ಲಿಗೆ ಲಾ ಅಂಡ್ ಆರ್ಡರ್​ ಎಡಿಜಿಪಿ ಅವರನ್ನು ಕಳುಹಿಸಿದ್ದೇನೆ. ಈಗಲೂ ಅವರು ಸ್ಪಾಟ್​ನಲ್ಲಿಯೇ ಇದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಫೈರ್ ಮಾಡಿದ ಬುಲೆಟ್ ಪೊಲೀಸರದ್ದು ಅಲ್ಲ ಅಂತ ತಿಳಿದುಬಂದಿದೆ. ಯಾವುದೇ ಪೊಲೀಸನವರ ಗನ್​ಗಳಿಂದ ಫೈರ್ ಆಗಿಲ್ಲ. ಮೃತನ ದೇಹಕ್ಕೆ ಹೊಕ್ಕ ಬುಲೆಟ್ ಸಂಗ್ರಹ ಮಾಡಿ ಪರಿಶೀಲನೆ ನಡೆಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ‘ಅದು ರೆಗ್ಯುಲರ್​ ಪೊಲೀಸ್ ಬುಲೆಟ್​​ಗೆ ಮ್ಯಾಚ್ ಆಗ್ತಿಲ್ಲ. ಯಾರೋ ಖಾಸಗಿ ವ್ಯಕ್ತಿಗಳಿಂದ ಫೈರ್ ಆಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆ ಬುಲೆಟ್ ಅನ್ನ ಈಗ FSLಗೆ ಕಳುಹಿಸಿದ್ದಾರೆ. ಅಲ್ಲಿದ್ದಂತಹ ಎಲ್ಲಾ ರಿವಾಲ್ವಾರ್ ಅಥವಾ ಗನ್​​ಗಳನ್ನು ಸೀಜ್ ಮಾಡಿದ್ದಾರೆ. ಪರಿಶೀಲನೆ ಬಳಿಕ ಯಾರ ಬುಲೆಟ್ ಎಂದು ಗೊತ್ತಾಗಲಿದೆ. FSL ಎಕ್ಸ್​​ಫರ್ಟ್​ಗಳು ಅದನ್ನು ಪತ್ತೆ ಹಚ್ಚುತ್ತಾರೆ. ಈಗ ಎರಡು ಕಡೆಯಿಂದಲೂ ದೂರು, ಪ್ರತಿದೂರು ಕೊಟ್ಟಿದ್ದಾರೆ’ ಎಂದರು.

ಆ ದೂರು ಪಡೆದು ಎರಡು ಕಡೆ ಎಫ್ಐಆರ್ ದಾಖಲಾಗಿವೆ. ನೂರಾರು ಜನರ ಹೆಸರನ್ನು ದೂರಿನಲ್ಲಿ ಕೊಟ್ಟಿದ್ದಾರೆ. ಒಬ್ಬೊಬ್ಬರನ್ನು ತನಿಖೆ ಮಾಡಲಾಗ್ತಿದೆ. ಉನ್ನತ ಮಟ್ಟದಲ್ಲಿ ತನಿಖೆ ಆಗಬೇಕು ಅಂತ ಸಿಎಂ ಸೂಚನೆ ಕೊಟ್ಟಿದ್ದಾರೆ. ನಾನು ಕೂಡಾ ನಮ್ಮ ಅಧಿಕಾರಿಗಳಿಗೆ ಹೇಳಿದ್ದೇನೆ. ಈ ಮಧ್ಯೆ ರಾಜಕೀಯ ಮುಖಂಡರುಗಳು ಅಲ್ಲಿಗೆ ಹೋಗಿ ಹೇಳಿಕೆಗಳನ್ನು ಕೊಡ್ತಿದ್ದಾರೆ. ನಮಗೆ ರಾಜಕೀಯ ಮುಖಂಡರ ಹೇಳಿಕೆಗಿಂತ ಅಲ್ಲಿ ನಡೆದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಿ ಅದನ್ನು ಹೊರಗೆ ತರುತ್ತೇವೆ ಎಂದು ಹೇಳಿದ್ದಾರೆ.

sambrama prabha editor suresh kt

LEAVE A REPLY

Please enter your comment!
Please enter your name here