ಮೈಸೂರು ಅರಮನೆ ಮುಂಭಾಗ ಸಿಲಿಂಡರಿನ​ ತಾಪ ಹೆಚ್ಚಾಗಿ ಸ್ಫೋಟ

0
25

Updated By: Priyalachhi

ಮೈಸೂರು: “ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಸ್ಫೋಟ ಅನಿರೀಕ್ಷಿತ. ಸಿಲಿಂಡರಿನ​ ತಾಪಮಾನ ಹೆಚ್ಚಾಗಿ ಸ್ಫೋಟಗೊಂಡಿದೆ” ಎಂದು ಸಚಿವ ಡಾ.ಹೆಚ್​.ಸಿ.ಮಹದೇವಪ್ಪ ಹೇಳಿದರು.

“ನಿನ್ನೆ ರಾತ್ರಿ ಸುಮಾರು 8.30ರ ಸುಮಾರಿಗೆ ಘಟನೆ ನಡೆದಿದೆ. ಸಿಲಿಂಡರ್​ ಸ್ಫೋಟಗೊಂಡು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಬಂದಿದ್ದ ಐವರಿಗೆ ಗಾಯವಾಗಿದೆ. ಇಬ್ಬರ ಸ್ಥಿತಿ (ಲಕ್ಷ್ಮಿ ಹಾಗೂ ಮಂಜುಳ) ಗಂಭೀರವಾಗಿದೆ. ಮೃತಪಟ್ಟ ವ್ಯಕ್ತಿ ಉತ್ತರ ಪ್ರದೇಶದವರಾಗಿದ್ದು ಸೀಸನಲ್​ ವ್ಯಾಪಾರಿ. ಈ ಬಾರಿ ಬಲೂನ್​ ಮಾರಾಟ ಮಾಡುತ್ತಿದ್ದರು. ಹೊರಗಡೆಯಿಂದ ಗ್ಯಾಸ್​ ಸಿಲಿಂಡರ್​ ತಂದು ಅವರು ಬಲೂನ್​ ವ್ಯಾಪಾರ ಮಾಡುತ್ತಿದ್ದರು. ಆ ಸಿಲಿಂಡರ್​ ತಾಪಮಾನ ಹೆಚ್ಚಾಗಿ ಸ್ಫೋಟಗೊಂಡಿದೆ” ಎಂದು ತಿಳಿಸಿದರು.

ಘಟನೆಯ ಮಾಹಿತಿ ಕೇಳಿದ NIA: “ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸಲು ನಾವು ಅವಕಾಶ ಕೊಡುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಅವರೇ ಗ್ಯಾಸ್​ ಸಿಲಿಂಡರ್​ ತಂದಿದ್ದಾರೆ. ಪೌಡರ್​ ಮಿಕ್ಸ್​ ಮಾಡಿ ಅವರೇ ರಾಸಾಯನಿಕ ಮಾಡಿಕೊಳ್ಳುತ್ತಾರೆ. ಅನಿರೀಕ್ಷಿತವಾಗಿ ಸ್ಫೋಟ ನಡೆದಿದೆ. ಇದೊಂದು ಪಾಠ. ಗಾಯಾಳುಗಳ ಚಿಕಿತ್ಸಾ ವೆಚ್ಚಗಳನ್ನು ಸರ್ಕಾರವೇ ನಿರ್ವಹಿಸಲಿದೆ. ಮುಖ್ಯಮಂತ್ರಿಗಳು ಪರಿಹಾರ ಘೋಷಿಸುವ ಬಗ್ಗೆ ಮಾತನಾಡಿದ್ದಾರೆ. NIA ಮಾಹಿತಿ ಕೇಳಿರುವುದು ರುಟೀನ್​ ಅಷ್ಟೇ. ಅವರು ತನಿಖೆ ಮಾಡಬಹುದು” ಎಂದರು.

“ಮೃತಪಟ್ಟ ಬಲೂನ್​ ವ್ಯಾಪಾರಿಯೊಂದಿಗೆ ಉತ್ತರ ಪ್ರದೇಶದಿಂದ ಇನ್ನಿಬ್ಬರು ಬಂದಿದ್ದರು. ಅವರು ಬೇರೆಡೆ ವ್ಯಾಪಾರ ಮಾಡುತ್ತಿದ್ದರು. ಘಟನೆಯಿಂದ ಎಚ್ಚೆತ್ತುಕೊಂಡಿದ್ದು, ಪ್ರವಾಸಿಗರ ನಗರಿಯಲ್ಲಿ ಈ ರೀತಿಯ ನಡೆಯಬಾರದು. ಪೊಲೀಸರಿಗೂ ಹೆಚ್ಚು ನಿಗಾವಹಿಸುವಂತೆ ಸೂಚಿಸಲಾಗಿದೆ. ನಾನು ದಾವಣಗೆರೆಗೆ ತೆರಳಬೇಕಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಈ ರೀತಿ ಘಟನೆ ನಡೆದಿದೆ, ತಕ್ಷಣ ತೆರೆಳುವಂತೆ ಸೂಚಿಸಿದರು. ಅವರ ಸೂಚನೆಯಂತೆ ಮೈಸೂರಿಗೆ ಆಗಮಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇನೆ” ಎಂದು ಹೇಳಿದರು.

sambrama prabha editor suresh kt

LEAVE A REPLY

Please enter your comment!
Please enter your name here